ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಧರ್ಮಸ್ಥಳದ ನೇತ್ರಾವತಿ ನದಿ ನೀರಿನಲ್ಲಿ ಸ್ನಾನಕ್ಕೆಂದು ಇಳಿದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಇದೀಗ ಪತ್ತೆಯಾಗಿದೆ.

 

ಬೆಂಗಳೂರಿನ ಹೆಬ್ಬಾಳದ ಕೆ ರಾಜು (31)ನೀರಿನಲ್ಲಿ ಮುಳುಗಿ ಮೃತಪಟ್ಟವರಾಗಿದ್ದಾರೆ.

ಧರ್ಮಸ್ಥಳ ದೇವಸ್ಥಾನಕ್ಕೆ ಬಂದ ಭಕ್ತರ ತಂಡವೊಂದು ಕಾಯರ್ತಡ್ಕ ಸಮೀಪದ ನೇತ್ರಾವತಿ ನದಿಗೆ ಸ್ನಾನ ಮಾಡಲು ನದಿಗೆ ಇಳಿದಿದ್ದು ನೀರಿನ ಆಳ ಗೊತ್ತಿಲ್ಲದೆ ರಾಜು ನೀರಿನಲ್ಲಿ ನಾಪತ್ತೆಯಾಗಿದ್ದ.

ವಿಚಾರ ತಿಳಿಯುತ್ತಿದ್ದಂತೆ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯ್ಸ್ ರವರು ಬೆಳಾಲು ವಿಪತ್ತು ನಿರ್ವಹಣಾ ಘಟಕದ ಮುಳುಗು ತಜ್ಞ ಹರೀಶ್ ಕೂಡಿಗೆ, ಸಂತೋಷ, ರವೀಂದ್ರ, ಪ್ರಕಾಶ್ ರವರೆಗೆ ವಿಷಯ ತಿಳಿಸಿ ತಕ್ಷಣ ಧಾವಿಸಿ ಬಂದ ಅವರು ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆಯುತ್ತಿರುವಾಗಲೇ ನೀರಿನಲ್ಲಿ ಮುಳುಗಿ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜೈವಂತ ಪಟಗಾರ, ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಮೋಹನ್ ಕೆ ಉಪಸ್ಥಿತರಿದ್ದರು.

Leave A Reply

Your email address will not be published.