ಬೆಳ್ತಂಗಡಿ:ತೆಂಕಕಾರಂದೂರು ಗ್ರಾಮದ ಯುವತಿ ಕೆಲಸಕ್ಕೆಂದು ತೆರಳಿ ವಾಪಸ್ಸು ಬಾರದೆ ನಾಪತ್ತೆ

Share the Article

ಬೆಳ್ತಂಗಡಿ :ತೆಂಕಕಾರಂದೂರು ಗ್ರಾಮದ ಗುಂಡೇರಿ ನಿವಾಸಿಯ ಯುವತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ರಕ್ಷಿತಾ(20)ಎಂಬುವವರು ನಾಪತ್ತೆಯಾದವರಾಗಿದ್ದು,ಇವರು ಗುರುವಾಯನಕೆರೆಯ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದರು.

ಎಂದಿನಂತೆ ಡಿ. 29ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಸಂಜೆ ಸುಮಾರು ಹೊತ್ತಿನವರೆಗೂ ಮನೆಗೆ ಮರಳಿ ಬಾರದೆ ಇರುವುದನ್ನು ಕಂಡು ಮನೆಯವರು ಆಕೆ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲಕರಲ್ಲಿ
ವಿಚಾರಿಸಿದ ವೇಳೆ ಆಕೆ ಕೆಲಸಕ್ಕೆ ಬಂದಿಲ್ಲವೆಂದು ಅಂಗಡಿ ಮಾಲಕರು ತಿಳಿಸಿದ್ದರು.

ಈ ಸಂಬಂಧ ಯುವತಿಯ ತಾಯಿ ನಾಪತ್ತೆಯಾಗಿರುವ ಮಗಳನ್ನು ಪತ್ತೆಹಚ್ಚುವಂತೆ ವೇಣೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡುವ ಈ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave A Reply