ಮುಸ್ಲಿಂ ರಾಷ್ಟ್ರಗಳಲ್ಲಿ ಭಗವದ್ಗೀತೆಯ 15 ಕೋಟಿ ಪ್ರತಿ ಮಾರಾಟ!
ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಜೆ ಜಲಾಲುದ್ದೀನ್ ವಾರಣಾಸಿ ಜೈಲಿನಿಂದ ಬಿಡುಗಡೆ ಹೊಂದಿದ್ದ.ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ಆತನಿಗೆ 16 ವರ್ಷ ಜೈಲುವಾಸವಾಗಿತ್ತು. ವಾರಣಾಸಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಆತ ಭಗವದ್ಗೀತೆಯನ್ನು ಖರೀದಿ ಮಾಡಿ ಪಾಕಿಸ್ತಾನಕ್ಕೆ ಕೊಂಡೊಯ್ದಿದ್ದ.
ಕೇವಲ ಪ್ರೌಢಶಿಕ್ಷಣ ಪಡೆದಿದ್ದ ಜಲಾಲುದ್ದೀನ್, ಜೈಲಿನಲ್ಲಿರುವಾಗಲೇ 10ನೇ ತರಗತಿ ತೇರ್ಗಡೆಯಾಗಿದ್ದಾನೆ. ಇಂದಿರಾ ಗಾಂಧಿ ಮುಕ್ತ ವಿವಿಯ ಮೂಲಕ ಎಂಎ ಪದವಿ ಪಡೆದು, ಜೈಲಿನಲ್ಲಿಯೇ ಎಲೆಕ್ಟಿಷಿಯನ್
ತರಬೇತಿಯನ್ನೂ ಮುಗಿಸಿದ್ದ,ಜೈಲಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿಯೂ ಕಾರ್ಯನಿರ್ವಹಿಸಿದ್ದ. ಇಂಥದ್ದೊಂದು ಸಾಧನೆ ಮಾಡಲು ಸ್ಫೂರ್ತಿಯಾದದ್ದು ಭಗವದ್ಗೀತೆ ಎಂದು ಆತ ಹೇಳಿಕೊಂಡಿದ್ದ.
ನಂತರ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯು ಉರ್ದುವಿನಲ್ಲಿ ಭಾಷಾಂತರಗೊಂಡು ಪಾಕಿಸ್ತಾನದ ಪ್ರಜೆಗಳ ಮನಸ್ಸನ್ನೂ ಮುಟ್ಟಿಬಿಟ್ಟಿತ್ತು. ಮುಸ್ಲಿಮರೇ ಈ ಪವಿತ್ರ ಗ್ರಂಥಕ್ಕೆ ಮನಸೋತಿದ್ದು, ಇದಾಗಲೇ 15 ಕೋಟಿ ಪ್ರತಿಗಳು ಅರಬ್ ದೇಶಗಳಲ್ಲಿ ಮಾರಾಟವಾಗಿದೆ ಎಂದು ಇಸ್ಕಾನ್ ಹೇಳಿಕೊಂಡಿದೆ.