ಚೇಳು ಕಡಿತಕ್ಕೊಳಗಾಗಿ ಯುವಕ ಬಲಿ|ಆತನ ನಿರ್ಲಕ್ಷವೇ ಜೀವಕ್ಕೆ ಕುತ್ತಾಯಿತೇ?

Share the Article

ಧಾರವಾಡ: ಚೇಳು ಕಡಿತಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಯಲ್ಲಪ್ಪ ಮೃತರಾಗಿದ್ದು,ಈತನಿಗೆ ಮೂರು ದಿನಗಳ ಹಿಂದೆ ಚೇಳು ಕಚ್ಚಿ ದೇಹಕ್ಕೆಲ್ಲ ವಿಷ ವ್ಯಾಪಿಸಿ ಆರೋಗ್ಯದಲ್ಲಿ ಏರುಪೇರಾಗಿತ್ತು.ಆದರೆ ಚೇಳು ಕಡಿತಕ್ಕೊಳಗಾದ ದಿನವೇ ಯುವಕ ಸೂಕ್ತ ಚಿಕಿತ್ಸೆ ಪಡೆಯದೆ ತಿರಸ್ಕರಿಸಿದ್ದರಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ.

ಆರೋಗ್ಯ ಹದಗೆಟ್ಟ ಹಿನ್ನೆಲೆ ಯಲ್ಲಪ್ಪನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply