ವಾಟ್ಸಾಪ್ ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್: ಅಡ್ಮಿನ್ ಹೊಣೆಯಲ್ಲ ಎಂದ ಹೈಕೋರ್ಟ್

ವಾಟ್ಸಾಪ್ ಗ್ರೂಪ್ ಗಳಲ್ಲಿ ಸದಸ್ಯರು ಹಾಕುವ ಆಕ್ಷೇಪಾರ್ಹ ಯಾ ಕಾನೂನು ಬಾಹಿರ ಅಸಂಬದ್ಧ ಪೋಸ್ಟ್ ಗಳಿಗೆ ಆ ಗ್ರೂಪ್ನ ಅಡ್ಮಿನ್ ಹೊಣೆಗಾರನಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಈ ಬಗ್ಗೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಿಂದ ಅಡ್ಮಿನ್ ಹೆಸರನ್ನು ಕೈಬಿಡುವಂತೆ ಪೊಲೀಸರಿಗೆ ಆದೇಶಿಸಿದೆ.

ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಸದಸ್ಯರು ಹಾಕಿದ್ದ ಆಕ್ಷೇಪಾರ್ಹ ಪೋಸ್ಟ್ ಗೆ ಕುರಿತು ದಾಖಲಾದ ಕ್ರಿಮಿನಲ್ ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ತಮಿಳುನಾಡಿನ ವಕೀಲ ಆರ್. ರಾಜೇಂದ್ರನ್ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯ ಪೀಠ ಈ ಆದೇಶ ಮಾಡಿದೆ.

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಸದಸ್ಯರ ಸೇರ್ಪಡೆ ಹಾಗೂ ಹೊರಗಟ್ಟುವ ಅಧಿಕಾರವಷ್ಟೇ ಇದೆ. ಗ್ರೂಪ್ ನಲ್ಲಿ ಯಾವ ವಿಷಯಗಳನ್ನು ಪೋಸ್ಟ್ ಮಾಡಬೇಕು ಅಥವಾ ನಿರ್ಬಂಧಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಅವರು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆಯೇ, ಯಾರು ಯಾವ ರೀತಿಯ ಪೋಸ್ಟ್ ಗಳನ್ನು ಹಾಕುತ್ತಾರೆ ಎಂದು ಮೊದಲೇ ಊಹಿಸಲು ಸಾಧ್ಯವಿಲ್ಲ. ಹೀಗಾಗಿ, ವಾಟ್ಸಾಪ್ ಗ್ರೂಪ್ ನಲ್ಲಿ ಬರುವ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ ವ್ಯಾಟ್ಸಾಪ್ ಗ್ರೂಪಲ್ಲಿರುವ ಸದಸ್ಯರಿಗೆ ಗ್ರೂಪಲ್ಲಿರುವ ಬೇರೆ ಯಾರೇ ಸದಸ್ಯರು ಆಕ್ಷೇಪಾರ್ಹ ಸಂದೇಶ ಕಳುಹಿಸಿದರೂ ಗ್ರೂಪ್‌ನ ಅಡ್ಮಿನ್ ಹೊಣೆಗಾರನಲ್ಲ ಎಂದೂ ಅಭಿಪ್ರಾಯಿಸಿದೆ.

ಅಲ್ಲದೆ ಗ್ರೂಪ್‌ನಿಂದ ಹೊರ ಹೋಗಲು ಪ್ರತೀ ಸದಸ್ಯರಿಗೆ ಮುಕ್ತ ಅವಕಾಶವಿದೆ.ಯಾರೋ ಮಾಡುವ ಸಮಸ್ಯೆಗೆ ಗ್ರೂಪ್ ಎಡ್ಮಿನ್‌ಗಳು ಹೊಣೆಗಾರರಾಗಲು ಸಾಧ್ಯವಿಲ್ಲ.

Leave A Reply

Your email address will not be published.