ಪ್ರತಿ ಮನೆ ವಿಳಾಸಕ್ಕೂ ಸಿಗಲಿದೆ ಡಿಜಿಟಲ್ ಸ್ಪರ್ಶ ! ಎಲ್ಲಾ ಮನೆಗಳಿಗೂ ಸಿಗಲಿದೆ ಡಿಜಿಟಲ್ ಅಡ್ರೆಸ್ ಕೋಡ್
ಎಲ್ಲೋ ಹೋಗಬೇಕು, ಯಾರಿಗೋ ಪಾರ್ಸೆಲ್ ತಲುಪಿಸಬೇಕು, ಆಸ್ತಿ ತೆರಿಗೆ ಕಟ್ಟಬೇಕು, ಕೊಟ್ಟಿರುವ ವಿಳಾಸ ಜತೆಯಲ್ಲಿದೆಯೋ?, ಸರಿಯಾಗಿದೆಯೋ? ಎಂದೆಲ್ಲ ಅನುಮಾನ, ಆತಂಕ ಪಡುವ ಕಾಲ ಭವಿಷ್ಯದ ದಿನಗಳಲ್ಲಿ ದೂರವಾಗಲಿದೆ. ನಿರ್ದಿಷ್ಟ ವಿಳಾಸದ ಗುರುತಿಸುವಿಕೆ ಮತ್ತು ತಲುಪುವಿಕೆ ಇನ್ನು ಕಷ್ಟವಾಗಲಾರದು.
ಯಾಕೆಂದರೆ ಶೀಘ್ರದಲ್ಲೇ ಎಲ್ಲರ ಮನೆಗೂ ಡಿಜಿಟಲ್ ಆಡ್ರೆಸ್ ಕೋಡ್ (ಡಿಎಸಿ) ಸಿಗಲಿದೆ. ವಿಳಾಸದ ಬದಲು ಈ ಡಿಎಸಿಯನ್ನು ಕೊಟ್ಟರೆ ಸಾಕು. ನಿಮ್ಮ ಎಲ್ಲ ಕೆಲಸಗಳು ಸಾಂಗವಾಗಿ ನೆರವೇರುತ್ತವೆ. ಈಗ ದೇಶದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಇರುವಂತೆ ಪ್ರತೀ ಮನೆಗೂ ಡಿಎಸಿ ಅನ್ನು ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ.
ಅತ್ಯಂತ ಮಹತ್ವಾಕಾಂಕ್ಷೆಯ ಈ ಯೋಜನೆ ಜನಗಣತಿ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ, ಮತದಾರರ ಪಟ್ಟಿ ರಚನೆಗೆ ಸಹಕಾರಿಯಾಗಲಿದೆ. ಸದ್ಯ ಇದು ಪ್ರಾಸ್ತಾವಿಕ ಹಂತದಲ್ಲಿದ್ದು ಈ ಬಗ್ಗೆ ಎಸ್ತತ ಚರ್ಚೆಗಳು ಇನ್ನಷ್ಟೇ ನಡೆಯಬೇಕಿದೆ. ಆದರೆ ಕೇಂದ್ರ ಸರಕಾರ ಮಾತ್ರ ಈ ದಿಸೆಯಲ್ಲಿ ಹೆಜ್ಜೆ ಇರಿಸಿದೆ.