ಪ್ರಯಾಣಿಕರಿಗೊಂದು ಸಿಹಿ ಸುದ್ದಿ | ಇನ್ನು ಮುಂದೆ ಇಂಟರ್ ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು !!
ಎಲ್ಲಾದರೂ ಪ್ರವಾಸ ಹೋಗಬೇಕೆಂದರೆ ಅಥವಾ ಯಾವುದಾದರೂ ಹೊಸ ಜಾಗಕ್ಕೆ ಹೋಗಬೇಕಾದರೆ ನಾವು ನೆರವು ಪಡೆಯುವುದೇ ಗೂಗಲ್ ಮ್ಯಾಪ್ ನದ್ದು. ಗೂಗಲ್ ಮ್ಯಾಪ್ ಒಂದಿದ್ದರೆ ಸಾಕು, ನಮಗೆ ಹೋಗುವ ಮುನ್ನವೇ ತಲುಪಲು ತೆಗೆದುಕೊಳ್ಳುವ ಸಮಯ, ದೂರ ಎಲ್ಲವೂ ತಿಳಿಯುತ್ತದೆ. ಇಂತಹ ಗೂಗಲ್ ಮ್ಯಾಪ್ ಕೂಡ ಒಮ್ಮೊಮ್ಮೆ ಕೈಕೊಡುತ್ತದೆ… ಅದು ಯಾವಾಗ ಎಂದರೆ ನೆಟ್ ವರ್ಕ್/ಇಂಟರ್ ನೆಟ್ ಇಲ್ಲದ ಟೈಮ್ ನಲ್ಲಿ. ಆದರೆ ಇನ್ನು ಮುಂದೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಇನ್ನು ಇಂಟರ್ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಅನ್ನು ಬಳಸಬಹುದು !!
ಹೌದು, ಗೂಗಲ್ ಮ್ಯಾಪ್ ಅಪ್ಲಿಕೇಶನ್ ನಮ್ಮೆಲ್ಲರಿಗೂ ದಾರಿ ತೋರಿಸುವ ಮಾರ್ಗದರ್ಶಕವಾಗಿದೆ ಎಂದರೆ ತಪ್ಪಾಗಲಾರದು. ಈ ಹೊಸ ಫೀಚರಲ್ಲಿ ದಾರಿ ಹುಡುಕುವಾಗ ಸ್ಮಾರ್ಟ್ಫೋನ್ ಮತ್ತು iOS ಗಳಲ್ಲಿ ಗೂಗಲ್ ಮ್ಯಾಪ್ ಆಫ್ಲೈನ್ ಫೀಚರ್ ಬಳಸಬಹುದು. ಇದನ್ನು ಸಕ್ರಿಯಗೊಳಿಸಲು, ನಿಮ್ಮ ಸಾಧನದಲ್ಲಿ ಗೂಗಲ್ ಮ್ಯಾಪ್ ಅಪ್ಲಿಕೇಶನ್ಗೆ ಹೋಗಿ. ಈ ಫೀಚರ್ನ್ನು ಸಕ್ರಿಯಗೊಳಿಸಲು ನಿಮಗೆ ಇಂಟರ್ನೆಟ್ ಸಂಪರ್ಕ ಅತ್ಯಗತ್ಯ ಮತ್ತು ಸ್ಮಾರ್ಟ್ಫೋನ್ ಇನ್ಕಾಗ್ನಿಟೋ ಮೋಡ್ನಲ್ಲಿ ಇರಬಾರದು.
ಇದೀಗ ಗೂಗಲ್ ಮ್ಯಾಪ್ ಅಪ್ಲಿಕೇಶನ್ನ ಬಲಭಾಗದ ಮೇಲ್ತುದಿಯನ್ನು ಗಮನಿಸಿ, ಅಲ್ಲಿ ನಿಮಗೆ ನಿಮ್ಮ ಪ್ರೊಫೈಲ್ ಪಿಕ್ಚರ್ ಕಾಣಿಸುತ್ತದೆ. ನಿಮ್ಮ ಪ್ರೊಫೈಲ್ ಅನ್ನು ತೆರೆಯಿರಿ. ಇಲ್ಲಿ offline maps ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ ನಂತರ ನಿಮಗೆ Select Your Offline Map ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ, ನಂತರ Select Your Own Map ಆಯ್ಕೆ ಮಾಡಿ.
ಇದೀಗ ಗೂಗಲ್ ಮ್ಯಾಪ್ನಲ್ಲಿ ತೋರಿಸುವ ನೀಲಿ ಗುರುತಿನೊಳಗೆ ನಿಮಗೆ ಅಗತ್ಯವಿರುವ ಎಲ್ಲ ಪ್ರದೇಶಗಳನ್ನೂ ಆಯ್ಕೆಮಾಡಿಕೊಳ್ಳಿ. ಅಂದರೆ ನಿಮಗೆ ಇಂಟರ್ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಎಲ್ಲೆಲ್ಲಿ ಬೇಕು ಎಂದು ಆ ನೀಲಿ ಸರ್ಕಲ್ನಲ್ಲಿ ಸೇರಿಸಿ. ನಂತರ ಆಯ್ಕೆಮಾಡಿಕೊಂಡ ಪ್ರದೇಶಗಳ ಮ್ಯಾಪ್ನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಯೆಸ್! ಇದೀಗ ನೀವು ಡೌನ್ಲೋಡ್ ಮಾಡಿಕೊಂಡ ಆಫ್ಲೈನ್ ಮ್ಯಾಪ್ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು. ಅಂದಹಾಗೆ ನಿಧಾನವಾಗಿ ಪ್ರಯಾಣಿಸಿ, ಹ್ಯಾಪಿ ಜರ್ನಿ !!