ಮಾರುಕಟ್ಟೆಗೆ ಹೊಸದಾಗಿ ಬಂದಿದೆ ಎಲೆಕ್ಟ್ರಿಕ್ ಹೈಸ್ಪೀಡ್ ಸ್ಟೈಲಿಶ್ ಸ್ಕೂಟರ್ | ಒಮ್ಮೆ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ಓಡುವ ಈ ಗಾಡಿಯನ್ನು ಕೇವಲ 1,999 ರೂ.ಗೆ ಕೂಡಲೇ ಬುಕ್ ಮಾಡಿ
ನವದೆಹಲಿ : ಭಾರತೀಯ ಮಾರುಕಟ್ಟೆ ದಿನದಿಂದ ದಿನಕ್ಕೆ ಉತ್ತಮವಾದ ಬ್ರ್ಯಾಂಡ್ ಗಳನ್ನು ಪ್ರದರ್ಶಿಸುತ್ತಲೇ ಇದೆ. ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯಾದ ಬಳಿಕ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬರುತ್ತಿದೆ. ಇದೀಗ ಇತ್ತೀಚಿನ ಬ್ರ್ಯಾಂಡ್ ಒಕಾಯಾ ಎಲೆಕ್ಟ್ರಿಕ್ ಸ್ಕೂಟರ್ ಕೂಡಾ ಮಾರುಕಟ್ಟೆಗೆ ಎಂಟ್ರಿ ನೀಡಿದೆ.
ಈ ಸ್ಕೂಟರ್ ಅನ್ನು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ EV ಎಕ್ಸ್ಪೋ 2021 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಹೆಸರು ಫಾಸ್ಟ್ . ಇದರ ಎಕ್ಸ್ ಶೋ ರೂಂ ಬೆಲೆ 90,000 ರೂ. ಆಗಿದ್ದು ಕೇವಲ ರೂ 1,999 ಟೋಕನ್ ಮೊತ್ತ ಪಾವತಿಸುವ ಮೂಲಕ ಈ ಹೈ ಸ್ಪೀಡ್ ಸ್ಕೂಟರನ್ನು ಬುಕ್ ಮಾಡಬಹುದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಕಾಯಾ ಎಲೆಕ್ಟ್ರಿಕ್ನ ಅಧಿಕೃತ ವೆಬ್ಸೈಟ್ ಮೂಲಕ ಮತ್ತು ಡೀಲರ್ಶಿಪ್ಗಳ ಮೂಲಕ ಬುಕ್ ಮಾಡಬಹುದು.
ಒಕಾಯಾ ಫಾಸ್ಟ್ ಕನೆಕ್ಟೆಡ್ ಎಲೆಕ್ಟ್ರಿಕ್ ಸ್ಕೂಟರ್ 4.4 kWh ಲಿಥಿಯಂ-ಫಾಸ್ಫೇಟ್ ಬ್ಯಾಟರಿ ಪ್ಯಾಕ್ನಿಂದ ಚಾಲಿತವಾಗಿದೆ. ಈ ಸ್ಕೂಟರ್ ಒಂದೇ ಚಾರ್ಜ್ನಲ್ಲಿ 150 ಕಿಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ. ಬ್ಯಾಟರಿಯನ್ನು ಸರಿಯಾಗಿ ಬಳಸಿದರೆ, ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀವರೆಗೆ ಓಡಬಹುದು ಎನ್ನಲಾಗಿದೆ. ಒಕಾಯಾ ಫಾಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಎಲ್ಇಡಿ ದೀಪಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡೇಟೈಮ್ ರನ್ನಿಂಗ್ ಲೈಟ್ಗಳು ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 60-70 ಕಿಮೀ ನಡುವೆ ಇರಲಿದೆ.
ಒಕಾಯಾ ಎಲೆಕ್ಟ್ರಿಕ್, EV ಎಕ್ಸ್ಪೋ 2021 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವುದರ ಜೊತೆಗೆ, ಮುಂಬರುವ ದಿನಗಳಲ್ಲಿ ಲಾಂಚ್ ಮಾಡಲಿರುವ ತನ್ನ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಫೆರಾಟೊವನ್ನು ಒಂದು ಝಲಕ್ ಅನ್ನು ಕೂಡಾ ಪರಿಚಯಿಸಿದ್ದು,ಈ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.
ಇ-ಮೋಟಾರ್ಸೈಕಲ್ ಅನ್ನು 2 kW ಮೋಟಾರ್ ಮತ್ತು 3 kW ಬ್ಯಾಟರಿಯೊಂದಿಗೆ 90 ಕಿಮೀ / ಗಂ ವೇಗದಲ್ಲಿ ಓಡಿಸಬಹುದಾಗಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು 100 ಕಿ.ಮೀ ವರೆಗೆ ಓಡಿಸಬಹುದು. ಕಂಪನಿಯು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಬ್ರ್ಯಾಂಡ್ ಆಗುವ ಗುರಿಯನ್ನು ಹೊಂದಿದೆ. ಈ ಸ್ಟಾರ್ಟ್ಅಪ್ 6 ತಿಂಗಳಲ್ಲಿ ದೇಶಾದ್ಯಂತ 225 ಕ್ಕೂ ಹೆಚ್ಚು ಡೀಲರ್ಶಿಪ್ಗಳನ್ನು ಸೃಷ್ಟಿಸಿದೆ.