ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ, ನಾಥೂರಾಮ್ ಗೋಡ್ಸೆಗೆ ಜೈ ಎಂದ ಹಿಂದೂ ಮುಖಂಡ !! | ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ದಾಖಲು

ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ, ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಹಿಂದೂ ಮುಖಂಡ, ಸನ್ಯಾಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಮಹಾರಾಷ್ಟ್ರ ಮೂಲದ ಸನ್ಯಾಸಿ ಕಾಳಿಚರಣ್ ಮಹಾರಾಜ್ ಹೇಳಿಕೆಯ ವಿರುದ್ಧ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ರಾಯ್ಪುರದಲ್ಲಿ ನಡೆದಿದ್ದ ಧರ್ಮ ಸಂಸದ್ ಅಧಿವೇಶನದಲ್ಲಿ ಕಾಳಿಚರಣ್ ಮಹಾರಾಜ್ ಅವರು ತಮ್ಮ ಭಾಷಣದಲ್ಲಿ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಳಿಚರಣ್, ‘ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ. ನಮ್ಮ ಮುಂದೆಯೇ ಅವರು 1947 ರಲ್ಲಿ (ವಿಭಜನೆಯನ್ನು ಉಲ್ಲೇಖಿಸಿ) ದೇಶಗಳನ್ನು ವಶಪಡಿಸಿಕೊಂಡರು. ಅವರು ಮೊದಲು ಇರಾನ್, ಇರಾಕ್ ಮತ್ತು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರು. ಬಳಿಕ ಅವರು ರಾಜಕೀಯದ ಮೂಲಕವೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ’ ಎಂದಿದ್ದರು.

ಅದೇ ಭಾಷಣದಲ್ಲಿ ಕಾಳಿಚರಣ್ ಮಹಾರಾಜ್ ಗಾಂಧಿ ಹಂತಕ ಗೋಡ್ಸೆಯನ್ನು ಹೊಗಳಿದ್ದರು. ಅಲ್ಲದೆ ಅಂಥ ವ್ಯಕ್ತಿಯೇ ಹಿಂದೂ ಮುಖಂಡನಾಗಬೇಕು, ಅಂಥ ವ್ಯಕ್ತಿಯೇ ಸರ್ಕಾರದ ಮುಖ್ಯಸ್ಥನಾಗಬೇಕು. ಅವರಿಂದಲೇ ಧರ್ಮ ಉಳಿಯುತ್ತದೆ ಎಂದು ಅವರು ಭಾಷಣದಲ್ಲಿ ಹೇಳಿದ್ದರು.

ಇವರ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರನ್ನು ಕೆರಳುವಂತೆ ಮಾಡಿತ್ತು. ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ನೀಡಿರುವ ದೂರಿನ ಆಧಾರದ ಮೇಲೆ ಕಾಳಿಚರಣ್ ವಿರುದ್ಧ ಭಾನುವಾರ ರಾತ್ರಿ ತಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.