ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗೆ ಬಂಪರ್ ಆಫರ್‌ | ಇಂದು ಕೇವಲ ಒಂದು ರೂಪಾಯಿಗೆ ಸಿಗುತ್ತದೆಯಂತೆ ಈ ವಸ್ತುಗಳು !!

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡುತ್ತಿರುತ್ತವೆ. ಇತ್ತೀಚಿಗೆ ಅಮೆಜಾನ್ ಕೂಡ ತನ್ನ ಗ್ರಾಹಕರಿಗಾಗಿ ಒಂದು ಮೆಗಾ ಆಫರ್ ಘೋಷಿಸಿತ್ತು. ಹಾಗೆಯೇ ಇದೀಗ ಫ್ಲಿಪ್ ಕಾರ್ಟ್ ಕೂಡ ಅದೇ ಹಾದಿಯಲ್ಲಿ ಸಾಗಿದೆ.

 

ಅಮೆಜಾನ್ ನಂತೆಯೇ ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫಿಪ್‌ಕಾರ್ಟ್‌ನಲ್ಲೂ ಪ್ರತಿದಿನ ಹೊಸ ಆಫರ್ ಗಳಿರುತ್ತವೆ. ಪ್ರತಿದಿನ ಕೆಲವೊಂದು ದಿನಸಿ ವಸ್ತುಗಳ ಮೇಲೆ ಅದ್ಭುತ ರಿಯಾಯಿತಿ ನೀಡುತ್ತದೆ. ಹಾಗೆಯೇ ಇಂದು ಕೇವಲ ಒಂದು ರೂಪಾಯಿಗೆ ಗೋಧಿ ಹಿಟ್ಟು, ತುಪ್ಪ, ಗೋಡಂಬಿ ಮತ್ತು ಕುಕೀಸ್ ನೀಡ್ತಿದೆ.

ಹೌದು, ಇಂದು ಒಂದು ಕೆ.ಜಿ ಗೋಧಿ ಹಿಟ್ಟು ಮತ್ತು ತುಪ್ಪವನ್ನು ಕೇವಲ ಒಂದು ರೂಪಾಯಿಗೆ ಖರೀದಿ
ಮಾಡಬಹುದಾಗಿದೆ. ಆನಂದ ತುಪ್ಪದ 100 ಎಂಎಲ್ ತುಪ್ಪದ ಪ್ಯಾಕೆಟ್ ಬೆಲೆ 55 ರೂಪಾಯಿ. ಆದರೆ ಇಂದು ಫ್ಲಿಪ್ ಕಾರ್ಟ್ ನಲ್ಲಿ ಶೇಕಡಾ 98ರ ರಿಯಾಯಿತಿಯಲ್ಲಿ, ಅಂದ್ರೆ ಒಂದು ರೂಪಾಯಿಗೆ 100 ಎಂಎಲ್ ತುಪ್ಪ ಸಿಗ್ತಿದೆ.

ಇಷ್ಟೇ ಅಲ್ಲ, ಒಂದು ಕೆಜಿ ಪಿಲ್ಸ್ ಬರಿ ಗೋಧಿ ಹಿಟ್ಟು ಕೂಡ ಒಂದು ರೂಪಾಯಿಗೆ ಸಿಗ್ತಿದೆ. ಅದರ ಮೂಲ ಬೆಲೆ 58 ರೂಪಾಯಿ. ಮೋಲ್ಸಿಯ ಗೋಡಂಬಿಯ 75 ಗ್ರಾಂ ಗೋಡಂಬಿ ಬೆಲೆ 129 ರೂಪಾಯಿಯಿದೆ. ಇಂದು ಫ್ಲಿಪ್ ಕಾರ್ಟ್ ನಲ್ಲಿ 9 ರೂಪಾಯಿಗೆ ಸಿಗ್ತಿದೆ. 35 ರೂಪಾಯಿ ಮೌಲ್ಯದ ಕುಕೀಸ್ ಗಳು ಕೂಡ 9 ರೂಪಾಯಿಗೆ ಸಿಗ್ತಿದೆ. ಗ್ರಾಹಕರು ಈ ಆಫರ್ ನ ಸದುಪಯೋಗ ಪಡಿಸಿಕೊಳ್ಳುವಂತೆ ಫ್ಲಿಪ್ ಕಾರ್ಟ್ ಕೇಳಿಕೊಂಡಿದೆ.

Leave A Reply

Your email address will not be published.