ಪಂಜ : ರಿಕ್ಷಾ-ಸ್ಕೂಟರ್ ನಡುವೆ ಅಪಘಾತ : ಮಹಿಳೆ,ಬಾಲಕಿಗೆ ಗಾಯ

ಪಂಜ ಪೇಟೆಯ ಕಡಬಕ್ಕೆ ತಿರುಗುವ ಜಂಕ್ಷನ್ ನಲ್ಲಿ ಸ್ಕೂಟರ್ ಮತ್ತು ರಿಕ್ಷಾ ಡಿಕ್ಕಿ ಹೊಡೆದ ಘಟನೆ ಡಿ.27 ರಂದು ಮುಂಜಾನೆ ನಡೆದಿದೆ.

 

ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಬರೆಪ್ಪಾಡಿಯಿಂದ ಕಮಿಲ ಕಡೆ ಹೊರಟಿದ್ದ ರಮೇಶ್ ಎಂಬವರ ರಿಕ್ಷಾ ಮತ್ತು ಸುನಿಲ್ ಎಂಬವರ ಸ್ಕೂಟರ್ ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ .

ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಬಾಲಕಿಗೆ‌ ಗಾಯವಾಗಿದ್ದು ಪಂಜದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.