ಕೃಷ್ಣ ನಗರಿ ದ್ವಾರಕಾದ ಮೇಲೆ ಹಕ್ಕು ಸಾಧಿಸಲು ಹೊರಟ ಸುನ್ನಿ ವಕ್ಫ್ ಬೋರ್ಡ್ !! | ಅರ್ಜಿಯನ್ನು ಮುಖಕ್ಕೆ ಎಸೆದಂತೆ ತಿರಸ್ಕರಿಸಿದ ಹೈಕೋರ್ಟ್ !!
ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ದ್ವಾರಕಾ ಕೂಡ ಒಂದು. ಆದರೆ ಈ ಪುಣ್ಯ ಕ್ಷೇತ್ರ ದ್ವಾರಕಾದಲ್ಲಿರುವ 2 ದ್ವೀಪಗಳ ಮೇಲೆ ಹಕ್ಕು ಸಾಧಿಸಲು ಹೈಕೋರ್ಟ್ ಗೆ ಅರ್ಜಿ ಹಾಕಿದ್ದ ಸುನ್ನಿ ವಕ್ಫ್ ಬೋರ್ಡ್ ಗೆ ಇದೀಗ ತೀವ್ರ ಮುಖಭಂಗವಾಗಿದೆ.
ದ್ವಾರಕಾದಲ್ಲಿನ 2 ದ್ವೀಪಗಳ ಮೇಲೆ ಹಕ್ಕು ಸಾಧಿಸಲು ಹೋದ ಸುನ್ನಿ ವಕ್ಸ್ ಬೋರ್ಡ್ ನ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿತ್ತು. ದ್ವಾರಕಾ ದ್ವೀಪ ಸಮೂಹದಲ್ಲಿ ಒಟ್ಟು 8 ಚಿಕ್ಕ ದ್ವೀಪಗಳಿವೆ. ಈ ದ್ವೀಪ ಸಮೂಹವನ್ನು ತಲುಪಲು ಓಖಾದಿಂದ ನೌಕೆಯ ಮೂಲಕ ಹೋಗಲು 30 ನಿಮಿಷ ತಗಲುತ್ತದೆ. ಈ ದ್ವೀಪ ಸಮೂಹದಲ್ಲಿ ಒಟ್ಟು 8000 ಕುಟುಂಬಗಳು ವಾಸಿಸುತ್ತಿದ್ದು, ಅವುಗಳಲ್ಲಿ 6000 ಮುಸಲ್ಮಾನ ಕುಟುಂಬಗಳಾಗಿವೆ.
ಆದ್ದರಿಂದ ಅರ್ಜಿಯಲ್ಲಿ ಸುನ್ನಿ ವಕ್ಫ್ ಬೋರ್ಡ್ ‘ದ್ವಾರಕಾ ದ್ವೀಪಸಮೂಹದ ಎರಡು ದ್ವೀಪಗಳ ಮೇಲೆ ನಮ್ಮ ಅಧಿಕಾರವಿದೆ’ ಎಂದು ಹೇಳಿದೆ. ಇದಕ್ಕೆ ನ್ಯಾಯಾಲಯವು, ನೀವು ಏನು ಹೇಳುತ್ತಿದ್ದೀರಿ ಎಂಬುದರ ಅರಿವಾದರೂ ನಿಮಗಿದೆಯೇ? ಶ್ರೀ ಕೃಷ್ಣನ ನಗರಿಯಾಗಿರುವ ಭೂಮಿಯ ಮೇಲೆ ವಕ್ಫ್ ಬೋರ್ಡ್ ತನ್ನ ಅಧಿಕಾರವಿದೆ ಎಂದು ಹೇಗೆ ಹೇಳಬಹುದು? ಎಂದು ಪ್ರಶ್ನಿಸಿ ಅರ್ಜಿಯನ್ನು ತಿರಸ್ಕರಿಸಿದೆ.