ರಸ್ತೆಬದಿ ಹಳ್ಳಕ್ಕೆ ಕಸ ಎಸೆಯುತ್ತಿದ್ದ ಯುವಕ ಸಿಟಿ ರವಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ !! | ರಸ್ತೆಯಲ್ಲೇ ಯುವಕನಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ ಬಿಜೆಪಿ ನಾಯಕ
ದೇಶದ ಭವಿಷ್ಯ ಯುವಕರ ಭವಿಷ್ಯದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಒಬ್ಬ ನಾಗರಿಕನಾಗಿ, ವಿದ್ಯಾರ್ಥಿಯಾಗಿ ಮತ್ತು ಯುವಕನಾಗಿ, ಆತನೇ ದೇಶದ ಅಭಿವೃದ್ಧಿಯ ಹೊಣೆಗಾರನಾಗಿರುತ್ತಾನೆ. ಇದಕ್ಕಾಗಿ ನಾವು ಯಾವಾಗಲೂ ಸಿದ್ಧರಾಗಿರಬೇಕು. ಆ ಅಭಿವೃದ್ಧಿ ಕಾರ್ಯ ಸ್ವಚ್ಛ ಭಾರತ್ ಮಿಷನ್ ಮೂಲಕ ಸಾಧ್ಯ. ಆದರೆ ಇಲ್ಲೊಬ್ಬ ಯುವಕ ತನ್ನ ಹೊಣೆಗಾರಿಕೆ ಮರೆತು ಬೇಜವಾಬ್ದಾರಿತನ ಪ್ರದರ್ಶಿಸಿದ್ದಾನೆ. ಅದಕ್ಕೆ ಆತ ರಸ್ತೆ ಮಧ್ಯೆಯೇ ಶಿಕ್ಷೆ ಅನುಭವಿಸಿದ್ದಾನೆ.
ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಟಿ ರವಿ ಮತ ಚಲಾಯಿಸಲು ಮತಗಟ್ಟೆಗೆ ತೆರಳುವ ಸಮಯದಲ್ಲಿ ಮಲ್ಲಂದೂರು ರಸ್ತೆ ಉಪ್ಪಳ್ಳಿ ಚಿತಾಗಾರ ಸಮೀಪದ ಯಗಚಿ ನದಿಗೆ ಸೇರುವ ಹಳ್ಳದಲ್ಲಿ ಯುವಕನು ಕಸ ಎಸೆಯುತ್ತಿದ್ದ. ಈ ವೇಳೆ ಕಾರಿನಿಂದ ಇಳಿದು ರವಿಯವರು ಯುವಕನಿಗೆ ರಸ್ತೆ ಮಧ್ಯೆಯೇ ಕ್ಲಾಸ್ ನಡೆದಿದೆ.
ಯುವಕನಿಗೆ ಹೊಟ್ಟೆಗೆ ಅನ್ನ ತಿನ್ನುತ್ತೀಯಾ ಅಥವಾ ಏನು ತಿಂತೀಯಾ? ಎಂದು ಕೇಳಿದ್ದು, ಬೆಳಗ್ಗೆ ಕಸದ ವಿಲೇವಾರಿ ಗಾಡಿ ಬರುತ್ತೇ ಅದಕ್ಕೆ ಹಾಕಲಿಕ್ಕೆ ಏನು ಸಮಸ್ಯೆ? ಯಾರ ಮಗ ನೀನು? ಇನ್ನೊಂದು ಸಾರಿ ನೀನು ಏನಾದರೂ ಇಲ್ಲಿ ಕಸ ಚೆಲ್ಲಿದರೆ ನೋಡು ಎಂದು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ.