ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ – ಕಟ್ಟುನಿಟ್ಟಿನ ಕ್ರಮ ಪಾಲಿಸಲು ಉಭಯ ಜಿಲ್ಲೆಗಳು ಸಜ್ಜು !! ರಾತ್ರಿ 10 ರ ಬಳಿಕ ಸುತ್ತಾಡುವ ಯೋಚನೆಯಲ್ಲಿರುವ ಸಾರ್ವಜನಿಕರೇ ಇಲ್ಲಿ ಗಮನಿಸಿ

ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ರೂಪಾಂತರಿ ವೈರಸ್ ವಿರುದ್ಧ ಹೋರಾಡಲು ದಕ್ಷಿಣ ಕನ್ನಡ-ಉಡುಪಿ ಉಭಯ ಜಿಲ್ಲೆಗಳು ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಅಗತ್ಯ ಮಾರ್ಗಸೂಚಿಯನ್ನು ಹೊರಡಿಸಿದೆ.

ಇಂದಿನಿಂದ ಜನವರಿ 07 ರ ವರೆಗೆ ರಾತ್ರಿ ಗಂಟೆ 10 ರಿಂದ ಮುಂಜಾನೆ 05 ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು,ಎರಡೂ ಜಿಲ್ಲೆಗಳಲ್ಲಿ ನಿಯಮಗಳನ್ನು ಯಥಾವತ್ತಾಗಿ ಪಾಲಿಸಲು ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅದೇಶಿಸಿದ್ದಾರೆ.

ಈ ನಡುವೆ ರಾತ್ರಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸಮಯ ನಿಗದಿ ಮಾಡಲಾಗಿದ್ದು, ಯಕ್ಷಗಾನ, ಉರೂಸ್, ಜಾತ್ರೆ ಹಾಗೂ ಇನ್ನಿತರ ರಾತ್ರಿಯ ಕಾರ್ಯಕ್ರಮ 10 ಗಂಟೆಯ ಒಳಗೆ ಮುಗಿಸುವ ರೀತಿಯಲ್ಲಿ ನಡೆಸಬೇಕು. ನೈಟ್ ಕರ್ಫ್ಯೂ ಆರಂಭವಾಗುವ ಮೊದಲೇ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸುವಂತೆ ಈಗಾಗಲೇ ನಿರ್ದೇಶಿಸಲಾಗಿದ್ದು, ಕಟ್ಟು ನಿಟ್ಟಿನ ಕ್ರಮದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.

ಅದಲ್ಲದೇ ಮದುವೆ ಇನ್ನಿತರ ಸಭೆ ಸಮಾರಂಭಗಳಲ್ಲಿ 300 ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಹೋಟೆಲ್, ಪಬ್, ಬಾರ್ ಗಳಲ್ಲಿ ನಿಯಮಗಳನ್ನು ಪಾಲಿಸಲು ಹಾಗೂ ಶೇ.50 ರಷ್ಟು ಮಂದಿಗೆ ಮಾತ್ರ ಅಸನವಿರಿಸಲು ಅದೇಶಿಸಲಾಗಿದೆ. ಕೇರಳ, ಮಹಾರಾಷ್ಟ್ರ ಹಾಗೂ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

Leave A Reply

Your email address will not be published.