ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ |
ಆಚರಣೆಗಳ ಮಹತ್ವ ತಿಳಿಸಿಕೊಡುವ ಕಾರ್ಯಗಳಾಗಬೇಕು-ಕಾಣಿಯೂರು ಶ್ರೀ
ಸವಣೂರು: ಸನಾತನ ಹಿಂದೂ ಧರ್ಮದಲ್ಲಿರುವ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯಗಳಾಗಬೇಕು.ಪ್ರತೀಯೊಂದು ಆಚರಣೆಗಳು ತನ್ನದೇ ಆದ ಮಹತ್ವ,ವೈಶಿಷ್ಟ್ತಹೊಂದಿದೆ ಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.
ಅವರು ತನು ತರ್ಪಣ ಸೇವೆ ನಡೆಯಲಿದೆ,ರಾತ್ರಿ ಅನ್ನಸಂತರ್ಪಣೆ ,ಕ್ಷೇತ್ರದ ದೈವಗಳ ನರ್ತನ ಸೇವೆ ನಡೆಯಲಿದೆ.
ರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧನಕ್ಕಿಂತಲೂ ತನು,ಮನದ ಸೇವೆ ಸರ್ವೆಯಲ್ಲಿ ಎದ್ದು ಕಾಣುತ್ತಿದೆ.ಈ ರೀತಿಯ ಕಾರ್ಯದಿಂದ ವಿಶ್ವಾಸ ವೃದ್ದಿಯಾಗುತ್ತದೆ.ಸರ್ವೆಯ ದೇವರಿಗೆ ಬ್ರಹ್ಮಕಲಶದ ಮೂಲಕ ಪೂರ್ಣ ಶಕ್ತಿ ನೀಡುವ ಕೆಲಸವಾಗಿದೆ.ಕೊರೊನಾ ಕಾಲದಲ್ಲೂ ಉತ್ತಮ ರೀತಿಯಲ್ಲಿ ದೇವಸ್ಥಾನ ನಿರ್ಮಿಸಿದ ಊರವರಿಗೆ,ಸಮಿತಿಯವರಿಗೆ ಅಭಿನಂದಿಸುತ್ತೇನೆ ಎಂದರು.
ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಕಾರ್ಯಕ್ರಮ ವ್ಯವಸ್ಥಾಪಕಿ ಲೋಚನಾ ಬಿ.ಶೆಟ್ಟಿ ಮಾತನಾಡಿ ,ವ್ಯವಹಾರದಲ್ಲಿ ಶಿಸ್ತು, ಪಾರದರ್ಶಕತೆ ಇರುವಾಗ ಯಾವುದೇ ಸಮಸ್ಯೆಯಾಗದು.ಭಕ್ತಿ ಶ್ರದ್ದೆ ಇರುವಲ್ಲಿ ಶಿಸ್ತು ಇರುತ್ತದೆ,ಶಿಸ್ತು ಇದ್ದರೆ ಅಭಿವೃದ್ದಿಯಾಗುತ್ತದೆ ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋ.ಯ ಟ್ರಸ್ಟ್ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ,ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಿಂದ ಊರಿಗೆ ಸನ್ಮಂಗಳ ಹಾಗೂ ಜನರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.ಮನೆ-ಮನೆಯಲ್ಲಿ ಭಜನೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ,ಸರ್ವೆಗೂ ನನಗೂ ಸಂಬAಧವಿದೆ.ನನ್ನ ತಾತನ ಮನೆ ಸರ್ವೆಯ ಭಕ್ತಕೋಡಿಯಲ್ಲಿದೆ.ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಭಾಗ್ಯವು ಪೂರ್ವಜನ್ಮದ ಪುಣ್ಯದ ಫಲ.ದೇವರ ಅನುಗ್ರಹದಿಂದ ಮುಕ್ತಿಹೊಂದಲು ಸಾಧ್ಯ ಎಂದರು.
ವೇದಿಕೆಯಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸುರೇಶ್ ರೈ ಸೂಡಿಮುಳ್ಳು, ಪ್ರಗತಿಪರ ಕೃಷಿಕ ಕಡಮಜಲು ಸುಭಾಶ್ ರೈ,ಶಶಿಕಲಾ ಶೆಟ್ಟಿ ಸೊರಕೆ, ಲಿಂಗಪ್ಪ ಗೌಡ ಕರುಂಬಾರು,ಮೀನಾಕ್ಷಿ ಕಾಯರ್ಮುಗೇರು,ನಿವೃತ ಭೂದಾಖಲೆ ಪರಿವೀಕ್ಷಕ ಬಾಲಕೃಷ್ಣ ಪೂಜಾರಿ ಕೆಂಗುಡೇಲು,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ,ಜೀಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಅಶೋಕ್ ನಾಯ್ಕ ಸೊರಕೆ,ವಸಂತ ರೈ ಸೊರಕೆ,ಜಗದೀಶ್ ರೈ ಬೊಟ್ಯಾಡಿಗುತ್ತು,ಆರ್ಥಿಕ ಸಮಿತಿ ಸಂಚಾಲಕ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ,ಕಾರ್ಯಾಧ್ಯಕ್ಷ ವಿಜಯ ಕುಮಾರ್ ರೈ ಸರ್ವೆ,ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಪ್ರ.ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆದೋಳಗುತ್ತು,ಪ್ರಧಾನ ಅರ್ಚಕ ಶ್ರೀರಾಮ ಕಲ್ಲೂರಾಯ ಉಪಸ್ಥಿತರಿದ್ದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎನ್.ಎಸ್.ಡಿ ವಂದಿಸಿದರು. ಶಿಕ್ಷಕರಾದ ಶ್ರೀಮತಿ ಪಿ ಹಾಗೂ ಪುಷ್ಪಾ ನಿರೂಪಿದರು. ಸಭೆಯ ಬಳಿಕ ಸತ್ಯೊದ ಸ್ವಾಮಿ ಕೊರಗಜ್ಜ ಯಕ್ಷಗಾನ ನಡೆಯಿತು.