ಗೋವು ನಮ್ಮ ತಾಯಿಯಲ್ಲ, ಗೋಮಾಂಸ ಸೇವನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರಂತೆ ಸಾವರ್ಕರ್ !! | ಮತ್ತೊಮ್ಮೆ ಸಾವರ್ಕರ್ ಗೆ ಅಪಮಾನ ಮಾಡಿ ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್

ಕಾಂಗ್ರೆಸ್ಸಿಗರು ದೇಶಕ್ಕಾಗಿ ಬಲಿದಾನ ಮಾಡಿದ ದೇಶಭಕ್ತರಿಗೆ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಹಾಗೆಯೇ ಪ್ರತಿಬಾರಿಯೂ ಹಿಂದೂಗಳ ಭಾವನೆಗಳಿಗೆ ಚ್ಯುತಿ ತರುವಂತಹ ಹೇಳಿಕೆಗಳನ್ನೇ ನೀಡುತ್ತಾ ಬಂದಿದ್ದಾರೆ. ಆ ಪಟ್ಟಿಗೆ ಇದೀಗ ಇನ್ನೊಂದು ಕಾಂಗ್ರೆಸ್ಸಿಗನ ಹೆಸರು ಸೇರ್ಪಡೆಯಾಗಿದೆ.

ಗೋವು ನಮ್ಮ ತಾಯಿ ಅಲ್ಲ, ಗೋ ಮಾಂಸ ಸೇವನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಾವರ್ಕರ್ ಅವರೇ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಭೋಪಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಗೋವು ನಮ್ಮ ಮಾತೆಯಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೀರ ಸಾವರ್ಕರ್ ಅವರ ಪುಸ್ತಕದಲ್ಲಿ ಬರೆದಿದ್ದಾರೆ ಎಂದಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿಕೆ ಕುರಿತಂತೆ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರು ಯಾವಾಗಲೂ ಹಿಂದೂಗಳಿಗೆ ಮಾನಹಾನಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಹಿಂದೂಗಳ ವಿರುದ್ಧ ಷಡ್ಯಂತ್ರ ಮಾಡಲು ಹಗಲಿರುಳು ಶ್ರಮಿಸುತ್ತಿರುವ ದಿಗ್ವಿಜಯ್ ಸಿಂಗ್ ಅವರೇ ಹಿಂದೂಗಳು ಮತ್ತು ಹಿಂದೂಸ್ತಾನದ ಅಭ್ಯುದಯಕ್ಕಾಗಿ ನೀವು ಶ್ರಮಿಸಿದ್ದರೆ, ಪಾಕಿಸ್ತಾನದಲ್ಲಿ ಜಿನ್ನಾ ಹುಟ್ಟುತ್ತಿರಲಿಲ್ಲ. ಭಯೋತ್ಪಾದನೆಯೂ ಇರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಕೆಲವೊಮ್ಮೆ ಸಾವರ್ಕರ್ ಮತ್ತು ಇತರೆ ಮಹಾನ್ ಪುರುಷರ ಹೆಸರಿನಲ್ಲಿ ದಿಗ್ವಿಜಯ್ ಸಿಂಗ್ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ದಿಗ್ವಿಜಯ್ ಸಿಂಗ್ ಅವರ ದೃಷ್ಟಿಯಲ್ಲಿ ಭಯೋತ್ಪಾದಕರು ದೇವರು, ಹೀಗಾಗಿ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿಕೆಗೆ ದೇಶದಲ್ಲಿ ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಹೇಳಿಕೆಯೇ ಕ್ಷಮೆಯಾಚಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಗೆ  ಕಾಂಗ್ರೆಸ್ಸಿಗರು ಪದೇ ಪದೇ ಅವಮಾನ ಮಾಡುತ್ತಿರುವುದು ಮಾತ್ರ ವಿಷಾದನೀಯವೇ ಸರಿ.

Leave A Reply

Your email address will not be published.