ಜಪಾನ್ ಪರಿಚಯಿಸಿದೆ ವಿಶ್ವದ ದ್ವಿ ಮಾದರಿಯ ವಾಹನ | ರಸ್ತೆ ಮೇಲೆ ಮಾತ್ರವಲ್ಲದೆ ರೈಲ್ವೆ ಹಳಿ ಮೇಲೂ ಚಲಿಸುತ್ತದೆಯಂತೆ ಈ ಮಿನಿ ಬಸ್ ಮಾದರಿಯ ವಾಹನ |ಇದರ ಇನ್ನಷ್ಟು ವಿಶಿಷ್ಟತೆ ಕುರಿತು ಇಲ್ಲಿದೆ ನೋಡಿ ಮಾಹಿತಿ
ಈ ಡಿಜಿಟಲ್ ಯುಗದಲ್ಲಿ ಟೆಕ್ನಾಲಜಿ ಮುಂದುವರೆಯುತ್ತಲೇ ಇದೆ. ಇದೀಗ ಜಪಾನ್ ದೇಶ ಹೊಸ ಟೆಕ್ನಾಲಜಿಯೊಂದನ್ನು ವಿಶ್ವಕ್ಕೆ ಪರಿಚಯಿಸಿದ.
ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿಗೆ ಜಪಾನ್ ಪಾತ್ರವಾಗಿದೆ.
ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ. ಹಾಗೆಯೇ ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್ಗಳಲ್ಲಿ ಚಲಿಸುತ್ತದೆ. ಈ ವಾಹನ ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು, ಅದು ರೈಲು ಹಳಿಗಳನ್ನು ಸ್ಪರ್ಶಿಸಿದಾಗ ಇಳಿಯುತ್ತದೆ. ಇದೇ ಈ ವಾಹನದ ವೈಶಿಷ್ಟ್ಯವಾಗಿದೆ. ಹಾಗೆಯೇ ಇದರ ಮುಂಭಾಗದ ಟೈರ್ಗಳನ್ನು ಹಳಿಯಿಂದ ಮೇಲಕ್ಕೆತ್ತಲಾಗುತ್ತದೆ. ಹಿಂದಿನ ಚಕ್ರಗಳು ಡಿಎಂವಿ ವಾಹನವನ್ನು ರೈಲುಮಾರ್ಗಕ್ಕೆ ಮುಂದೂಡಲು ಕೆಳಗಡೆ ಇರುತ್ತವೆ. ರೈಲು ಹಳಿಯಲ್ಲಿ ಸುಲಭವಾಗಿ ರೈಲಿನಂತಹ ಮಾಡ್ಯೂಲ್ ಆಗಿ ಪರಿಣಾಮಕಾರಿಯಾಗಿ ಬದಲಾಗುವ ಈ ವೈಶಿಷ್ಟ್ಯವು ವಿಶೇಷವಾಗಿದೆ.
ವರದಿಗಳ ಪ್ರಕಾರ, ಈ ವಾಹನ ಸುಮಾರು 21 ಪ್ರಯಾಣಿಕರನ್ನು ಕರೆದೊಯ್ಯಲಿದ್ದು, ಹಳಿ ಮೇಲೆ ಗಂಟೆಗೆ 60 ಕಿ.ಮೀ ವೇಗದಲ್ಲಿ, ಸಾರ್ವಜನಿಕ ರಸ್ತೆ ಮೇಲೆ ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಲಿದೆ.
ಸಣ್ಣ ಪಟ್ಟಣಗಳಿಗೆ ಈ ವಾಹನಗಳು ನೆರವಾಗಲಿವೆ ಎಂದು ಎಎಸ್ ಎ ಕೋಸ್ಟ್ ರೈಲ್ವೆ ಕಂಪನಿಯ ಸಿಇಒ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಡೀಸೆಲ್ ನಿಂದ ಚಲಿಸುವ ಈ ವಾಹನಗಳು ವಿವಿಧ ಬಣ್ಣಗಳಲ್ಲಿ ಬಂದಿವೆ. ಇದು ಅನೇಕ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುವ ಮೂಲಕ ಆಕರ್ಷಕ ಕಡಲ ತೀರದ ಪ್ರದೇಶಗಳನ್ನು ನೋಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿವೆ.