ಮೊಮ್ಮಗಳ ಜೊತೆಗೆ ಪದವಿ ಪೂರೈಸಿದ 87 ವರ್ಷದ ಅಜ್ಜ!
ನ್ಯೂಯಾರ್ಕ್ : ವಿದ್ಯೆ ಎಂಬುದು ಯಾರ ಮನೆಯ ಆಸ್ತಿಯೂ ಅಲ್ಲ. ಯಾವ ವಯಸ್ಸಿನಲ್ಲಿ ಓದಿ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು.
ವಯಸ್ಸಿನ ಹಂಗಿಲ್ಲದೆ ಯುವಕರನ್ನು ನಾಚಿಸುವಂತೆ ಪದವಿ ಪಡೆದು ಸಾಕಷ್ಟು ಜನರು ತಮ್ಮ ಜೀವನಕ್ಕೆ ಒಂದು ಅರ್ಥ ಕೊಟ್ಟುಕೊಂಡಿದ್ದಾರೆ. ಆದರೆ ಇದಕ್ಕೆಲ್ಲದಕ್ಕೂ ಕಾರಣ ಆಗಿದ್ದು ಓದಬೇಕೆಂಬ ಹಂಬಲ…ಓದಿನ ಮೇಲೆ ಇದ್ದ ಅತೀವ ಆಸಕ್ತಿ.
ಅದೇ ರೀತಿ ಈಗ 87 ವರ್ಷದ ವೃದ್ಧರೊಬ್ಬರು ಓದು ಹಾಗೂ ಕಲಿಕೆ ಬಗ್ಗೆ ತಮಗಿದ್ದ ಆಸಕ್ತಿಯಿಂದಲೇ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅಮೆರಿಕಾದಲ್ಲಿ ನಡೆದಿರುವ ಈ ಘಟನೆಯೊಂದು ತೀವ್ರ ವಿಭಿನ್ನ ಎನಿಸಿಕೊಂಡು ಎಲ್ಲರನ್ನೂ ಭಾವನಾತ್ಮಕವಾಗಿ ಮಾಡುತ್ತದೆ.
ಹೌದು 87 ವರ್ಷದ ವೃದ್ಧರೊಬ್ಬರು ತಮ್ಮ ಮೊಮ್ಮಗಳ ಜೊತೆಯಲ್ಲಿ ಓದಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಅಮೆರಿಕಾದ ನ್ಯೂಯಾರ್ಕಿನಲ್ಲಿ, ರೆನೇ ನೀರಾ ಎನ್ನುವ 87 ವರ್ಷದ ವೃದ್ಧರೊಬ್ಬರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ವಿಶೇಷ ಅಂದ್ರೆ ಅಜ್ಜನ ಜೊತೆಗೆ ಅವರ ಮೊಮ್ಮಗಳು ಮೆಲಾನಿ ಸಲಜರ್ ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಯುಟಿಎಸ್ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ಈ ಅಜ್ಜ ಮತ್ತು ಮೊಮ್ಮಗಳಿಗೆ ಪದವಿ ಪ್ರಧಾನ ಮಾಡಿ ಇವರ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.