ಈಕೆಗೆ ಎಡೆಬಿಡದೆ ಬಂದಿದೆಯಂತೆ ಬರೋಬ್ಬರಿ 4,500 ಕರೆಗಳು !! |ಅಷ್ಟೊಂದು ಕರೆಗಳು ಬರಲು ಕಾರಣ ಏನು ಗೊತ್ತಾ??

ಯಾರಿಗಾದರೂ ಒಂದೇ ಬಾರಿಗೆ 4-5 ಫೋನ್ ಕರೆಗಳು ಬಂದರೆ ಸಾಕು, ಎಷ್ಟು ಕರೆಯಪ್ಪಾ ಎಂದು ಕರೆ ಮಾಡಿದವರಿಗೆ ಬೈಯಲು ಪ್ರಾರಂಭಿಸುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆಗೆ ಎಡೆಬಿಡದೆ 4,500 ಕರೆಗಳು ಬಂದಿದೆ… ಹಾಗಾದ್ರೆ ಆಕೆಯ ಪರಿಸ್ಥಿತಿ ಹೇಗಿರಬೇಡ??

 

ಹೌದು, ಉತ್ತರ ಐರ್ಲೆಂಡ್ (ಎನ್‌ಐ) ಸರ್ಕಾರಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ಎಡಬಿಡದೇ 4,500 ಕರೆಗಳು ಬಂದಿರುವ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ಯೋಜನೆಯೊಂದರ ಪ್ರಚಾರಕ್ಕಾಗಿ ಜಾಹೀರಾತು ನೀಡಲಾಗಿತ್ತು. ಮಾಹಿತಿಗೆ ಸಹಾಯವಾಣಿ ನಂಬರ್ ಹಾಕುವಾಗ ಒಂದು ಸಂಖ್ಯೆ ತಪ್ಪಾಗಿದೆ. ಆ ತಪ್ಪಾದ ಸಂಖ್ಯೆ ಈ ಮಹಿಳೆಯ ಫೋನ್ ನಂಬರ್ ಆಗಿದೆ. ಪರಿಣಾಮವಾಗಿ ಆಕೆಯ ಫೋನ್‌ಗೆ 4,500 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಆಕೆ ಅರೆಕ್ಷಣ ದಿಗ್ಭ್ರಮೆಗೊಳಗಾಗಿದ್ದಾರೆ. ಬಿಡುವಿಲ್ಲದೇ ಬಂದ ಕರೆಗಳು ಮಹಿಳೆಗೆ ತಲೆನೋವಾಗಿ ಪರಿಣಮಿಸಿದೆ.

ಕೋವಿಡ್ ನಂತರ ಆರ್ಥಿಕ ಚೇತರಿಕೆ ಉದ್ದೇಶದಿಂದಾಗಿ ಸ್ಪೆಂಡ್ ಲೋಕಲ್ ಕಾರ್ಡ್ ಯೋಜನೆಯನ್ನು ಎನ್‌ಐ ರೂಪಿಸಿತ್ತು. ಸಣ್ಣಪುಟ್ಟ ವ್ಯಾಪಾರಗಳಿಗೆ ಹಣ ವಿನಿಯೋಗಿಸಲು ಅರ್ಹರಿಗೆ ಸ್ಪೆಂಡ್ ಲೋಕಲ್ ಪ್ರೀಪೇಯ್ಡ್ ಕಾರ್ಡ್ ನೀಡುವ ಯೋಜನೆಯಾಗಿತ್ತು. ಈ ಯೋಜನೆ ಸದುಪಯೋಗಪಡಿಸಿಕೊಳ್ಳಲೆಂದು ಜಾಹೀರಾತು ನೀಡಿ ಸಹಾಯವಾಣಿ ನಂಬರ್ ಹಾಕಲಾಗಿತ್ತು. ಸಹಾಯವಾಣಿಯ ಒಂದು ಸಂಖ್ಯೆ ತಪ್ಪಾಗಿ ಮಹಿಳೆಯ ನಂಬರ್ ನಮೂದಾಗಿದೆ. ಸಹಾಯವಾಣಿ ಎಂದು ತಿಳಿದ ಸಾವಿರಾರು ಜನರು ಆ ನಂಬರ್‌ಗೆ ಕರೆ ಮಾಡಿದ್ದಾರೆ.

ನಿರಂತರವಾಗಿ ಬಂದ ಕರೆಗಳಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದಾರೆ. ಏನು ನಡಿಯುತ್ತಿದೆ ಎಂಬುದು ತಿಳಿಯದೇ ಮಹಿಳೆ, ಕೊನೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರಲ್ಲಿ ವಿಚಾರಿಸಿದ್ದಾರೆ. ಆ ವ್ಯಕ್ತಿ ತಮಗೆ ಬಂದಿರುವ ಮೇಲ್ ಅನ್ನು ಮಹಿಳೆಗೆ ಫಾರ್‌ವರ್ಡ್ ಮಾಡಿದಾಗ ವಿಷಯ ಗೊತ್ತಾಗಿದೆ. ಹಾಗೆಯೇ
ತಾವು ಮಾಡಿದ ಪ್ರಮಾದಕ್ಕಾಗಿ ಅಧಿಕಾರಿಗಳು ಮಹಿಳೆ ಬಳಿ ಕ್ಷಮೆಯಾಚಿಸಿದ್ದಾರೆ.

Leave A Reply

Your email address will not be published.