ಮಸೀದಿ ಪಕ್ಕದಲ್ಲೇ ಇದ್ದ ಗ್ಯಾಸ್ ರಿಫಿಲ್ಲಿಂಗ್ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ

ಬೆಂಗಳೂರು :ಹೆಬ್ಬಾಳ ಬಳಿಯ ನಾಗವಾರದಲ್ಲಿ ಮಸೀದಿಗೆ ಹೊಂದಿಕೊಂಡಂತಿರುವ ಗ್ಯಾಸ್​ ರೀಫಿಲ್ಲಿಂಗ್​ ಅಂಗಡಿಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಪೋಟ ಸಂಭವಿಸಿದೆ.

 

ಅನಿಲ ಸೋರಿಕೆಯಿಂದಾಗಿ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇಂದು ಶುಕ್ರವಾರವಾದ್ದರಿಂದ ಪ್ರಾರ್ಥನೆಗಾಗಿ ಸಾವಿರಾರು ಮಂದಿ ಮಸೀದಿಗೆ ಆಗಮಿಸುತ್ತಿದ್ದರು. ಬೆಂಕಿ ಕಾಣಿಸಿಕೊಂಡ ಗ್ಯಾಸ್​ ರೀಫಿಲ್ಲಿಂಗ್​ ಅಂಗಡಿ ಮಸೀದಿಗೆ ಹೊಂದಿಕೊಂಡಂತೆ ಇದ್ದುದರಿಂದ ಜನರು ಬೆಚ್ಚಿ ಬಿದ್ದಿದ್ದಾರೆ.ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರನ್ನು ಸ್ಥಳದಿಂದ ದೂರಕ್ಕೆ ಕಳುಹಿಸಿ, ಯಾವುದೇ ಅನಾಹುತ ಆಗದಂತೆ ತಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Leave A Reply

Your email address will not be published.