ಸರ್ವೆ : ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ | ಸತ್ಯ,ಧರ್ಮ ಮೈಗೂಡಿಸಿಕೊಂಡವನಿಗೆ ಭಯವಿಲ್ಲ -ಕನ್ಯಾಡಿ ಶ್ರೀ

ಸವಣೂರು: ಸತ್ಯ, ಧರ್ಮ ಮೈಗೂಡಿಸಿಕೊಂಡವನಿಗೆ ಎಂದೂ ಭಯವಿಲ್ಲ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಗುರುವಾರ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಂಪತ್ತು ಕೂಡಿ ಹಾಕಿದವನಿಗೆ ಚಿಂತೆ ಹೆಚ್ಚು. ಹೀಗಾಗಿ ದಾನ, ಧರ್ಮ ಕಾರ್ಯಗಳಿಗೆ ಸಂಪತ್ತು ವಿನಿಯೋಗಿಸಬೇಕು. ಜೀವನ ದಲ್ಲಿ ಆಧ್ಯಾತ್ಮಿಕವನ್ನು ಮೈಗೂಡಿಸಿಕೊಳ್ಳಬೇಕು. ಶರೀರವೆಂಬ ರಥದೊಳಗಿನ ಜೀವಾತ್ಮನಿಗೆ ಸದ್ವಿಚಾರಗಳ ಅಭಿಷೇಕವಾಗಲಿ. ಮಕ್ಕಳಿಗೆ ಸಂಸ್ಕಾರ ಯುತ ಶಿಕ್ಷಣ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ದೇವಸ್ಥಾನ ಸುಜ್ಞಾನ ಬೋಧಿಸುವ ಕೇಂದ್ರ.
ದೇವಸ್ಥಾನದ ಬ್ರಹ್ಮ ಕಲಶ ದೊಂದಿಗೆ ಆತ್ಮದ ಆತ್ಮದ ಶುದ್ಧೀಕರಣ ಆಗಬೇಕು.ಈ ಮೂಲಕ‌ ಸುಂದರ ಸಮಾಜ‌‌ನಿರ್ಮಾಣ ಸಾಧ್ಯ‌. ಕರಾವಳಿಯ ದೇವಾಲಯ, ವೈದಿಕ ವೈಶಿಷ್ಟ್ಯ ಬೇರೆಲ್ಲೂ ಕಾಣಲು‌‌ ಅಸಾಧ್ಯ‌ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿ ಕೃಷ್ಣ ಹಸಂತಡ್ಕ, ಮೆಸ್ಕಾಂ ನಿರ್ದೇಶಕ ಕಿಶೋರ್ ಭಂಡಾರಿ ಬೊಟ್ಯಾಡಿ, ಗೆಜ್ಜೆ ಗಿರಿ ನಂದನ ಬಿತ್ತಿಲ್ ಆಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಶಾಂತಿಮೊಗರು ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸವಣೂರು ಮುಗೇರು ವಿಷ್ಣು ಮೂರ್ತಿ ದೇವಸ್ಥಾನದ ಸದಸ್ಯ ರಾಕೇಶ್ ರೈ ಕೆಡೆಂಜಿ, ಎಂ‌ಆರ್ಪಿಎಲ್ ಸೀನಿಯರ್ ಮೆನೇಜರ್ ಸೀತಾರಾಮ ರೈ ಚೆಲ್ಯಡ್ಕ,ಕೆದಂಬಾಡಿ ಗ್ರಾಪಂ‌ ಮಾಜಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ, ನಿವೃತ್ತ ರೈಲ್ವೇ ಅಧಿಕಾರಿ ಶಂಕರನಾರಾಯಣ ಭಟ್ ಸರ್ವೆ, ಮುಂಡೂರು ಗ್ರಾಪಂ‌ ಸದಸ್ಯರಾದ ಕಮಲೇಶ್ ಎಸ್ ಡಿ,‌ ವಿಜಯ ಕರ್ಮಿನಡ್ಕ, ಕಮಲಾ‌ ನೇರೊಲ್ತಡ್ಕ, ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ‌ಗೌತಮ್ ರಾಜ್ ಕರುಂಬಾರು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಶಶಿಧರ ಎಸ್ ಡಿ, ಪುರಂದರ ರೈ‌ ರೆಂಜಲಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಸದಸ್ಯ ರಾಧಾಕೃಷ್ಣ ರೈ ರೆಂಜಲಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಇದ್ದರು.

ಶುಕ್ರವಾರ ಮಧ್ಯಾಹ್ನ ಕರ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ, ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

Leave A Reply

Your email address will not be published.