ಕಡಬ: ಧರ್ಮ ರಕ್ಷಾ ದಿವಸ್ ಕಾರ್ಯಕ್ರಮ
ಕಡಬ: ಮೂಲನಂಬಿಕೆಯ ಅಧಾರದಲ್ಲಿ ಮುನ್ನಡೆಯುತ್ತಿರುವ ಹಿಂದೂ ಧರ್ಮದಲ್ಲಿ ಕಠಿನ ಕಟ್ಟುಪಾಡುಗಳಿಲ್ಲ, ಇದರಿಂದಾಗಿ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗಿದೆ. ಮಕ್ಕಳಿಗೆ ಎಳವೆಯಿಂದ ಸಂಸ್ಕಾರಯುತ ಧಾರ್ಮಿಕ ಶಿಕ್ಷಣ ನೀಡುವ ಮುಖಾಂತರ ಮತಾಂತರದAತಹ ಪಿಡುಗನ್ನು ದೂರವಾಗಿಸಬಹುದು ಎಂದು ಸುಬ್ರಹ್ಮಣ್ಯ ಮಠಾದೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಹೇಳಿದರು.
ಅವರು ಕಡಬ ಶ್ರೀ ದುರ್ಗಾಂಬಿಕಾ ವಠಾರದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಧರ್ಮ ಪ್ರಸಾರ ವಿಭಾಗ ನೇತೃತ್ವದಲ್ಲಿ ಮತಾಂತರ ವಿರುದ್ದ ಹೋರಾಡಿ ಬಲಿದಾನಗೈದ ಶ್ರೀ ಶ್ರದ್ದಾನಂದ ಸ್ವಾಮಿಜಿಯವರ ಬಲಿದಾನ ದಿವಸ ಅಂಗವಾಗಿ ಧರ್ಮ ರಕ್ಷ ದಿವಸ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ದೇವರ ಮೇಲಿನ ಭಯ ಮತ್ತು ಭÀಕ್ತಿ ನಮ್ಮನ್ನು ಬದುಕಿನಲ್ಲಿ ತಪ್ಪು ದಾರಿ ತುಳಿಯದಂತೆ ನಿಯಂತ್ರಿಸುತ್ತದೆ. ಧರ್ಮದ ಚೌಕಟ್ಟನ್ನು ಮೀರಿದ ಬದುಕು ಎಂದಿಗೂ ಸರಿದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಆದುದರಿಂದ ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳ ಅರಿವನ್ನು ಮೂಡಿಸಬೇಕು. ಎಳೆವೆಯಲ್ಲಿಯೇ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕೆಲಸವನ್ನು ಮಾಡಬೇಕು ಎಂದರು.
ಧರ್ಮ ಪ್ರಸಾರ್ ಪ್ರಾಂತ ಪ್ರಮುಖ್ ಕೃಷ್ಣ ಮೂರ್ತಿ ಪ್ರಮುಖ ಬಾಷಣ ಮಾಡಿದರು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್ , ವಿಹಂಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು.
ಧರ್ಮ ಪ್ರಸಾರ ಪುತ್ತೂರು ಜಿಲ್ಲಾ ಪ್ರಮುಖ್ ಕೃಷ್ಣ ಉಪಾಧ್ಯಾಯ ಪ್ರಸ್ತಾವಿಸಿ ಸ್ವಾಗತಿಸಿದರು. ವಿ.ಹಂ.ಪ ಕಡಬ ಪ್ರಖಂಡ ಅಧ್ಯಕ್ಷ ರಾಧಕೃಷ್ಣ ಕೊಲ್ಪೆ ವಂದಿಸಿದರು. ವಿಶಾಖ್ ಪುತ್ತೂರು, ನವೀನ್ ನೆರಿಯ ನಿರೂಪಿಸಿದರು.