ಕಳ್ಳರನ್ನು ಹಿಡಿಯಬೇಕಾದ ಪೊಲೀಸ್ ಕಾನ್‌ಸ್ಟೇಬಲೇ ದೊಡ್ಡ ಕಳ್ಳ !! | ಅಪ್ರಾಪ್ತರನ್ನು ಬಳಸಿಕೊಂಡು ಬೈಕ್ ಕಳ್ಳತನ ಮಾಡುಸ್ತಿದ್ದ ಪೊಲೀಸಪ್ಪ ಅರೆಸ್ಟ್

ಜನರಿಗೆ ರಕ್ಷಣೆ ಒದಗಿಸಬೇಕಾದ ಹಾಗೂ ಸಾರ್ವಜನಿಕರ ಸ್ವತ್ತಿನ ಮೇಲೆ ಕಳ್ಳಕಾಕರ ಕಣ್ಣು ಬೀಳದಂತೆ ಕಾವಲು ಕಾಯಬೇಕಾದ ಪೊಲೀಸಪ್ಪನೇ ಕಳ್ಳತನಕ್ಕೆ ಸಾಥ್ ನೀಡಿ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೌದು, ಅಪ್ರಾಪ್ತರನ್ನು ಬಳಸಿಕೊಂಡು ಬೈಕ್‌ಗಳನ್ನು ಕಳ್ಳತನ ಮಾಡಿಸ್ತಿದ್ದ ಕಾನ್‌ಸ್ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೊನ್ನಪ್ಪ ಅಲಿಯಾಸ್ ರವಿ ಎಂದು ಗುರುತಿಸಲಾಗಿದೆ. 2016ರ ಬ್ಯಾಚ್‌ನ ಸಿವಿಲ್ ಕಾನ್‌ಸ್ಟೇಬಲ್‌ ಆಗಿರುವ ಹೊನ್ನಪ್ಪ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿದ್ದ.

ಹೊನ್ನಪ್ಪ ಜೊತೆಗೆ ರಾಜಸ್ಥಾನದ ರಮೇಶ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ಓಎಲ ಎಕ್ಸ್‌ನಲ್ಲಿ ಯಾವ ಗಾಡಿಗೆ ಬೇಡಿಕೆ ಇದೆ ಅಂತಹ ಗಾಡಿಯನ್ನೇ ಹುಡುಕಿ ಕಳ್ಳತನ ಮಾಡಿಸುತ್ತಿದ್ದ. ಅಪ್ರಾಪ್ತ ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ರು. ಬಳಿಕ ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ರೂ. ಹಣವನ್ನು ಹುಡುಗರಿಗೆ ನೀಡ್ತಿದ್ದ.

ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‌ಗಳ ಕಳ್ಳತನ ಮಾಡಿಸಿದ್ದಾನೆ. ತಪಾಸಣೆ ವೇಳೆ ಪೊಲೀಸರು ಗಾಡಿ ಹಿಡಿದಾಗ ಅವರಿಗೆ ಕರೆ ಮಾಡಿ ನಾನು ಪೊಲೀಸ್ ನಮ್ಮ ಕಡೆಯವರು ಬಿಡಿ ಅಂತ ಬಿಡಿಸುತ್ತಿದ್ದ. ಇದೀಗ ಪೊಲೀಸರ ಕೈಗೆ ಹೊನ್ನಪ್ಪ ಸಿಕ್ಕಿಬಿದ್ದಿದ್ದು, ವಾರೆಂಟ್ ಮೇಲೆ ವಶಕ್ಕೆ ಪಡೆದು ಮಾಗಡಿ ರಸ್ತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಾಗೆಯೇ ಖದೀಮರಿಂದ ಈವರೆಗೆ ಮಾರಾಟವಾದ 53 ಬೈಕ್‌ಗಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.