ಸಾಯಲು ಹೊರಟವನ ಜೀವ ಉಳಿಸಿದ ಕೊನೆಯ ಆನ್ಲೈನ್ ಫುಡ್ ಡೆಲಿವರಿ!!
ಒಬ್ಬನ ಬದುಕು ಯಾವ ರೀತಿಲಿ ಇರಬೇಕು ಎಂಬುದು ಆತ ಹೇಗೆ ರೂಪಿತಗೊಳಿಸುತ್ತಾನೆ ಅದರ ಮೇಲೆ ನಿಲ್ಲುತ್ತದೆ. ಉತ್ತಮವಾದ ಮಾರ್ಗವನ್ನು ಆಯ್ದು ಕೊಂಡರೆ, ಆತ ಕೆಟ್ಟ ಆಲೋಚನೆಯನ್ನೂ ಮಾಡದೇ ತನ್ನ ಗುರಿಯತ್ತ ಹೆಜ್ಜೆ ಹಾಕಿ ಬದುಕು ಸುಂದರವಾಗಿಸುತ್ತಾನೆ.ಹೀಗೆ ಜೀವನ ಇಷ್ಟೇ ಬದುಕಿರುವಷ್ಟು ದಿನ ನಗು-ನಗುತ್ತಾ ಬದುಕಬೇಕು ಅಷ್ಟೇ..
ಇಷ್ಟೆಲ್ಲಾ ಜೀವನದ ಕುರಿತು ಏಕೆ ತಿಳಿಸುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಿ ಅಲ್ವಾ?.ಹೌದು. ಬದುಕು ಎಷ್ಟು ದಿನವೆಂಬುದನ್ನು ಕೂಡ ಭಗವಂತನೆ ಬರೆದಿರುತ್ತಾನೆ. ಅದಕ್ಕಿಂತ ಮುಂಚೆ ವಿಧಿಯೇ ಕರೆದರೂ ಅದಕ್ಕೆ ನೂರೆಂಟು ತಡೆಗಳು ಇದ್ದೇ ಇರುತ್ತದೆ. ಇದೇ ರೀತಿ ಇಲ್ಲೊಬ್ಬ ತನ್ನ ಜೇವನವನ್ನೇ ಅಂತ್ಯ ಮಾಡಲು ಹೊರಟವನಿಗೆ ಕೊನೆಯ ಆನ್ಲೈನ್ ಫುಡ್ ಆರ್ಡರ್ ಬದುಕು ಕೊಟ್ಟಿದೆ. ಅದೇಗೆ? ಮುಂದೆ ನೋಡಿ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಗ್ರಾಹಕರೊಬ್ಬರು ತಮ್ಮ ವ್ಯಾಪಾರವನ್ನು ಕಳೆದುಕೊಂಡಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರು. ಆದರೂ ಸಾಯುವ ಮುಂಚೆ ತನಗೆ ಇಷ್ಟವಾದ ತಿಂಡಿ ತಿಂದು ಸಾಯುವ ಎಂಬ ಆಸೆಯಿಂದ ಆನ್ಲೈನ್ ನಲ್ಲಿ ಊಟಕ್ಕೆ ಆರ್ಡರ್ ಮಾಡಿದ. ಬಳಿಕ ಡೆಲಿವರಿ ಬಾಯ್ ಡೆಲಿವರಿ ಮಾಡಲು ಗ್ರಾಹಕರ ಮನೆಗೆ ಬರುತ್ತಾನೆ.’ದಿ ಲಾಸ್ಟ್ ಮೀಲ್ ಇನ್ ಮೈ ಲೈಫ್’ ಎಂಬ ಟಿಪ್ಪಣಿ ಇತ್ತು ಅದು ನನ್ನ ಜೀವನದ ಕೊನೆಯ ಊಟ. ಇದನ್ನು ನೋಡಿದ ಡೆಲಿವರಿ ಬಾಯ್ ಶಾಕ್ ಆಗಿ ಗ್ರಾಹಕನ ಮನೆಯ ಬಾಗಿಲು ಬಡಿಯಲು ಯತ್ನಿಸಿದರು. ಎಷ್ಟು ಸಮಯದಿಂದ ಹೊರಗೆ ಬರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಬಂದು, ಬಾಗಿಲು ತೆರೆಯುವಂತೆ ಗ್ರಾಹಕರನ್ನು ಕೇಳಿಕೊಂಡರು.ಆದರೆ ಗ್ರಾಹಕ ಬಲವಂತವಾಗಿ ಒಳಗೆ ಬಂದರೆ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.ನಂತರ ಪೊಲೀಸರು ಸಂತ್ರಸ್ತನಿಗೆ ಸಾಂತ್ವನ ಹೇಳಿ ಮಾತಿಗೆಳೆದು,ಸಂತ್ರಸ್ತ ಹೇಳಿದ್ದನ್ನು ತಾಳ್ಮೆಯಿಂದ ಆಲಿಸಿದರು. ಆಗ,ತಾನು ಮಾಡುತ್ತಿದ್ದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದಾಗಿ ಸಂತ್ರಸ್ತ ತಿಳಿಸಿದ್ದಾರೆ. ನಂತರ ಪೊಲೀಸರು ಕೊಠಡಿ ಪ್ರವೇಶಿಸಿದರು. ಗ್ರಾಹಕರು ನೋವಿನಿಂದ ಈಗಾಗಲೇ 60 ನಿದ್ದೆ ಮಾತ್ರೆಗಳನ್ನು ನುಂಗಿದ್ದನ್ನು ಕಂಡುಹಿಡಿದು ರಕ್ಷಿಸಿದ್ದಾರೆ.
ಅಂತೂ ಈ ಘಟನೆ ಒಂದು ನೀತಿ ಪಾಠನೇ ತಿಳಿಸಿದೆ. ಸಾವಿನ ಕೊನೆಯ ಕ್ಷಣದಲ್ಲಿ ಆತನಿಗೆ ಉತ್ತಮವಾದ ಸಂದೇಶ ದೊರಕಿದ್ದರಿಂದ ಆತ ಪ್ರಾಣ ಉಳಿಸಿಕೊಂಡ. ಹೀಗೆ ಪ್ರತಿಯೊಬ್ಬರಿಗೂ ಉತ್ತಮವಾದ ತಿಳುವಳಿಕೆಯ ಮಾತನ್ನು ಹೇಳಿದರೆ ಯಾರೊಬ್ಬನು ಏನನ್ನೂ ಸಾಧಿಸಬಲ್ಲ ಎಂಬುವುದಕ್ಕೆ ನಿದರ್ಶನವಾಗಿ ನಿಂತಿದೆ ಈ ಘಟನೆ. ಡೆಲಿವರಿ ಬಾಯ್ ನ ಸಮಯ ಪ್ರಜ್ಞೆಯಿಂದ ಒಂದು ಜೀವ ಉಳಿಯಿತು. ಇದೇ ರೀತಿ ಓದುಗರಾದ ನಿಮ್ಮೆಲ್ಲರ ಶುಭ ನುಡಿಗಳಿಂದ ಇನ್ನೊಬ್ಬರ ಬಾಳು ಬೆಳಗಲಿ ಎಂಬುದೇ ನಮ್ಮ ಆಶಯ.