ಈ ಟಿ-ಶರ್ಟ್ ಧರಿಸಿದರೆ ಚೂರಿಯಿಂದ ತಿವಿದರೂ ರಕ್ಷಿಸುತ್ತದೆ!
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಹೊಸ ಹೊಸ
ನಾವೀನ್ಯತೆಗಳನ್ನು ಪಡೆದುಕೊಂಡು ಮುಂದುವರಿಯುತ್ತಿವೆ. ಅದೆಷ್ಟೋ ಹೊಸ ಹೊಸ ಪ್ರಯೋಗಗಳನ್ನು ವಿಜ್ಞಾನಿಗಳು ತಂತ್ರಜ್ಞಾನಿಗಳು ನಡೆಸುತ್ತಿದ್ದಾರೆ.
ಈಗ ಇಂತಹುದ್ದೇ ಒಂದು ವಿನೂತನ ಸಾಹಸಕ್ಕೆ ಬ್ರಿಟಿಷ್ ಆರ್ಮರ್ ಕಂಪನಿ (British Armor Company) ಕೈ ಹಾಕಿದ್ದು ಅನನ್ಯವಾದ ಟಿ-ಶರ್ಟ್ ಒಂದನ್ನು ಅಭಿವೃದ್ಧಿಪಡಿಸಿದೆ.
ಟಿ-ಶರ್ಟ್ನ ವಿಶೇಷತೆ ಏನೆಂದರೆ ಹರಿತವಾದ ಚಾಕುವಿನ ದಾಳಿಯಿಂದ ಇದು ನಿಮ್ಮನ್ನು ಒಂದಿನಿತೂ ಹಾನಿಯಾಗದಂತೆ ಸಂರಕ್ಷಿಸುತ್ತದೆ. ದೇಹ ಸಂರಕ್ಷಿಸುವ ರಕ್ಷಾಕವಚಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ PPSS ಗ್ರೂಪ್ ಎಂಬುದು ಟಿ-ಶರ್ಟ್ ಅಭಿವೃದ್ಧಿಪಡಿಸಿರುವ ಸಂಸ್ಥೆಯಾಗಿದೆ. ಹತ್ತಿಗಿಂತಲೂ ಹೆಚ್ಚು ಸದೃಢವಾಗಿರುವ ಆಕ್ಸಿಲಮ್ ಎಂಬ ವಿಶಿಷ್ಟ ಕಾರ್ಬನ್ ಫೈಬರ್ ಸಂಯೋಜಿತ ವಸ್ತುವಿನಿಂದ ಟಿ-ಶರ್ಟ್ ತಯಾರಿಸಲಾಗಿದೆ. ಈ ಟಿಶರ್ಟ್ ಅನ್ನು ಇತರ ಬಟ್ಟೆಗಳಂತೆಯೇ ಮೆಶೀನ್ಗಳಲ್ಲಿ ಕೂಡ ತೊಳೆಯಬಹುದಾಗಿದ್ದು, ಬೆವರು ವಾಸನೆಯಿಂದ ನೀವು ರಕ್ಷಣೆ ಪಡೆಯಬಹುದು. ಈ ಟಿ-ಶರ್ಟ್ ಅತ್ಯಂತ ಹಗುರವಾಗಿದ್ದು ಆಘಾತ-ನಿರೋಧಕವಾಗಿ, ಲೋಹದ ಮೊನಚಾದ ಆಯುಧಗಳನ್ನು ಕೂಡ ಮೊಂಡಾಗಿಸುತ್ತದೆ.