ನ್ಯಾಯಾಲಯದ ವಾಶ್ ರೂಂನಲ್ಲಿ ಸ್ಫೋಟ !! | ಇಬ್ಬರು ಸಾವು, ಹಲವರಿಗೆ ಗಾಯ

ಲುಧಿಯಾನಾ: ಪಂಜಾಬ್​ನ ಲುಧಿಯಾನಾ ನಗರದಲ್ಲಿರುವ ನ್ಯಾಯಾಲಯವೊಂದರ ಎರಡನೇ ಮಹಡಿಯಲ್ಲಿರುವ ವಾಶ್​ ರೂಂನಲ್ಲಿ ಇಂದು ಸ್ಫೋಟ ಉಂಟಾಗಿದೆ.

ಘಟನೆಯಲ್ಲಿ ಮಹಿಳೆ ಸೇರಿ, ಇಬ್ಬರು ಮೃತಪಟ್ಟಿದ್ದಾರೆ.ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.ಅಲ್ಲದೆ ಕೆಳಗೆ ವಾಹನ ನಿಲುಗಡೆ ಜಾಗವೂ ಧ್ವಂಸಗೊಂಡಿದ್ದು,ಅಲ್ಲಿ ಹಾಕಿದ್ದ ಇಟ್ಟಿಗೆ, ಕಬ್ಬಿಣದ ಕಂಬಗಳು ಬಿದ್ದಿರುವ ಮಾಹಿತಿ ವರದಿಯಾಗಿದೆ.

ಇದು ಆರು ಮಹಡಿಗಳ ಕಟ್ಟಡವಾಗಿದ್ದು, ಎರಡನೇ ಮಹಡಿಯಲ್ಲಿರುವ ವಾಶ್​ ರೂಂನಲ್ಲಿ ಸ್ಫೋಟವುಂಟಾಗಿದ್ದು,ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿ ಅಪಾರ ಜನ-ಸಾಗರ ಸೇರಿದೆ.ಸ್ಥಳಕ್ಕೆ ಪೊಲೀಸ್​ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.ಘಟನೆಯಲ್ಲಿ,ಕಟ್ಟಡದಿಂದ ಹೊಗೆ ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave A Reply

Your email address will not be published.