ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ್ಯು

Share the Article

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಮಠದಬೆಟ್ಟುವಿನಲ್ಲಿರುವ ಸೀತಾನದಿಗೆ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ಮಂಗಳೂರು ಬಂದರು ನಿವಾಸಿ ಮೊಹಮ್ಮದ್ ಇಕ್ವಾಲ್(24) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಇವರು, ಮಠದಬೆಟ್ಟು ವಿನಲ್ಲಿರುವ ತನ್ನ ಸಂಬಂಧಿಕ ಮುಸ್ತಫಾ ಎಂಬವರ ಮನೆಗೆ ಬಂದಿದ್ದು, ಅಲ್ಲಿ ಮನೆ ಸಮೀಪ ಇರುವ ಸೀತಾನದಿಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಇಕ್ವಾಲ್ ನೀರಿನ ಆಳ ತಿಳಿಯದೆ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply