ರೈಲಿನ ಇಂಜಿನ್ ಅನ್ನೇ ಮಾರಿದ ಇಲಾಖೆಯ ಇಂಜಿನಿಯರ್
ರೈಲ್ವೆ ಇಂಜಿನಿಯರೊಬ್ಬರು ನಕಲಿ ದಾಖಲೆಗಳನ್ನು ಉಪಯೋಗಿಸಿ ರೈಲಿನ ಎಂಜಿನ್‌ನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.
ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಟೀಸ ಶೇಡ್‌ನ ರೈಲ್ವೆ ಪರ್ನಿಯಾ ಸ್ಟೇಷನ್‌ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್ ನ್ನು ಮಾರಾಟ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.
ಇವರ ಈ ದುಷ್ಕೃತ್ಯಕ್ಕೆ ಭದ್ರತಾ ಸಿಬ್ಬಂದಿ ಮತ್ತು ಇತರೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಇಂಜಿನಿಯರ್ ಫ್ಯಾಬ್ರಿಕೇಟೆಡ್ ಡಿಎಂಐ ಪೇಪರ್ ವರ್ಕ್ ಇಟ್ಟುಕೊಂಡು ರೈಲ್ವೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.
ಡಿಸೆಂಬರ್ 14ರಂದು ಅಕ್ರಮ ಮಾರಾಟ ನಡೆದಿದ್ದು ಎರಡು ದಿನಗಳ ನಂತರ ಬೆಳಕಿಗೆ ಬಂದಿದೆ. ಪುರ್ನಿಯಾ ಕೋರ್ಟ್ ಸ್ಟೇಷನ್ ಔಟ್ ಪೋಸ್ಟ್‌ನಲ್ಲಿ ಡಿಸೆಂಬರ್ 19ರಂದು ಎಫ್‌ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಎಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಏಳು ಜನರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.