ಇಂದಿನಿಂದ ಡಿ.28ರವರೆಗೆ ‘ಸಂತಾನ ಭಾಗ್ಯಕರುಣಿಸುವ ಸರ್ವೆ ಶ್ರೀ ಸುಬ್ರಹ್ಮಣೇಶ್ವರನ ಸನ್ನಿಧಿಯಲ್ಲಿ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ
ಪುತ್ತೂರು: ಪುನಃ ನಿರ್ಮಾಣಗೊಂಡ ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಡಿ.21ರಿಂದ 28ರವರೆಗೆ ನಡೆಯಲಿದೆ.
ಈ ದೇವಸ್ಥಾನ ಸುಮಾರು 400 ವರ್ಷಗಳಷ್ಟು ಪುರಾತನವಾದದ್ದು. ಇಲ್ಲಿನ ದೇವರು ಸಂತಾನ ಭಾಗ್ಯಕರುಣಿಸುವ ಸಂತಾನ ಸುಬ್ರಹ್ಮಣ್ಯನೆಂದು ಖ್ಯಾತಿ ಪಡೆದಿದ್ದು ಹಲವಾರು ಭಕ್ತರು ಮಂಗಳ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕಾಗಿ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ದೇವಾಲಯ ವಾಅಸ್ತುಶಿಲ್ಪಿ ಮಹೇಶ್ ಮುನಿಯಂಗಳ ಮಾರ್ಗದರ್ಶನದಂತೆ ಎರಡು ಅಂತರದ ಗರ್ಭಗುಡಿ, ತೀರ್ಥಮಂಟಪ, ಸುತ್ತುಗೋಪುರದಲ್ಲಿ ಉಪಗುಡಿಗಳು, ಸ್ತಂಭಗಳು, ಮುಖಮಂಟಪ, ದೈವಸ್ಥಾನ, ತೀರ್ಥಬಾವಿ, ಮಹಾಭಲಿ ಪೀಠ, ವಸಂತಕಟ್ಟೆ, ಹೊಂದಿದ್ದು ಬಹುಪಾಳು ಶಿಲಾಮಯವಾಗಿದೆ. ತೀರ್ಥಮಂಟಪ ಮತ್ತು ಗರ್ಭಗುಡಿ ಮಾಡಿಗೆ ತಾಮ್ರದ ಹೊದಿಕೆ ಮಾಡಲಾಗಿದೆ.
ದೇವಳದಲ್ಲಿ ಕೆಮ್ಮಿಂಜೆ ವೇದಮೂರ್ತಿ ಸುಬ್ರಹ್ಮಣ್ಯ
ಬಳ್ಳಕ್ಕುರಾಯರ ನೇತೃತ್ವದಲ್ಲಿ ಡಿ.21ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ. 21ರಂದು ಬೆಳಗ್ಗೆ 10 ಗಂಟೆಗೆ ದೇವಳಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸಾಯಂಕಾಲ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಬಳಿಕ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.22ರಂದು ಸಾಯಂಕಾಲ ಗ್ರಾಮದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 23ರಂದು ಸಾಯಂಕಾಲ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ ಭರತನಾಟ್ಯ ರಾತ್ರಿ ಲಲಿತೆ ಕೂಟಕ ಕಲಾವಿದರಿಂದ ಕಟೀಲಪ್ಪ ಉಳ್ಳಾಲ್ಲಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.23ರಂದು ಸಾಯಂಕಾಲ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ ಭರತನಾಟ್ಯ, ರಾತ್ರಿ ಲಲಿತೆ ಕೂಟಕ ಕಲಾವಿದರಿಂದ ಕಟೀಲ್ಡಪ್ಪೆ ಉಳ್ಳಾಲ್ತಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.24ರಂದು ಸಾಯಂಕಾಲ ಆದಿಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವನ ನೀಡುವರು. ಮಧ್ಯಾಹ್ನ ಕರ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ, ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿದೆ.
ಡಿ.25ರಂದು ಸಾಯಂಕಾಲ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥಶ್ರೀಪಾದರು ಆಶೀರ್ವಚನ ನೀಡುವರು. ಸಚಿವ ಅಂಗಾರ ಎಸ್ ಮಾಜಿ ಶಾಸಕಿಯರಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್ ಭಂಡಾರಿ ಮತ್ತಿತರರು ಪಾಲ್ಗೊಳ್ಳುವರು . ಬೆಳಗ್ಗೆ ಕಾವ್ಯ ಶ್ರೀ ಅಜೇರು ಕಂಠ ಸಿರಿಯಲ್ಲಿ ಕುಮಾರ ವಿಜಯ ತಾಳಮದ್ದಳೆ, ರಾತ್ರಿ ಸತ್ಯದ ಸ್ವಾಮಿ ಕೊರಗಜ್ಜ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಡಿ.26ರಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, 10 ಗಂಟೆಗೆ ರತ್ನನ್ಯಾಸಾದಿ ಪೀಠ ಪ್ರತಿಷ್ಠೆ ಬಳಿಕ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪ್ರತಿದಿನ ಅನ್ನದಾನ ಸೇವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಸಾಯಂಕಾಲ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತಿತರರು ಭಾಗವಹಿಸುವರು. ಅಂದು ಮಧ್ಯಾಹ್ನ ಭಕ್ತಿ ರಸಮಂಜರಿ, ರಾತ್ರಿ ನೃತ್ಯಗಾನ ವೈಭವ ಕಾರ್ಯಕ್ರಮ ನಡೆಯಲಿದೆ.
ದೇವಾಲಯ ನಿರ್ಮಾಣದ ವೇಳೆ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಮರಗಳನ್ನು ದಾನ ಮಾಡಿದ್ದಾರೆ. ಕಡಿದ ಮರಗಳ ಬದಲಿ ಮತ್ತೆ ಅದೇ ಸ್ಥಳದಲ್ಲಿ ಗಿಡ ಬೆಳೆಸುವ ವಿನೂತನ ಯೋಜನೆಯನ್ನು ದೇವಸ್ಥಾನ ಹಮ್ಮಿಕೊಂಡಿದೆ. ಮುಂದಿನ ಜೂನ್ನಲ್ಲಿ ಗ್ರಾಮದ ಮನೆಗೊಂದು ಗಿಡವನ್ನು ದೇವರ ಪ್ರಸಾದ ರೂಪವಾಗಿ ವಿತರಿಸಲಾಗುವುದು. ದೇವಳದ ಖಾಲಿ ಜಾಗಗಳಲ್ಲಿ ಹಸಿರು ಬೆಳೆಸಲಾಗುವುದು. ದೇವಳದ ವತಿಯಿಂದ ಕನಿಷ್ಠ 1500 ಗಿಡಗಳನ್ನು ಬೆಳೆಸುವ ಗುರಿ ಇದೆ.