ಸ್ಮಶಾನದಲ್ಲಿ ಸಿಕ್ಕಿತು ಬರೋಬ್ಬರಿ 16 ಕೆ.ಜಿ ಚಿನ್ನ !! | ಸ್ಮಶಾನದಲ್ಲಿ ಚಿನ್ನ ಸಿಗಲು ಕಾರಣ??
ಕಳ್ಳತನ ಮಾಡೋ ಕಳ್ಳರು ಅದೆಷ್ಟು ಚುರುಕುತನದಿಂದ ಕೆಲಸ ಮಾಡುತ್ತಾರೆ ಎಂದರೆ ತಾವು ಕಳವು ಮಾಡಿದ ವಸ್ತು ಯಾರ ಕಣ್ಣಿಗೂ ಬೀಳದಂತೆ ಭದ್ರವಾಗಿ ಇರಿಸುತ್ತಾರೆ. ಕೆಲವರು ತಕ್ಷಣಕ್ಕೆ ಮಾರಾಟ ಮಾಡಿ ಹಣ ಗಳಿಸಿಕೊಂಡರೆ ಇನ್ನು ಕೆಲವರು ಸೇಫ್ ಆದ ಪ್ರದೇಶದಲ್ಲೋ, ಮಣ್ಣಿನಡಿಯಲ್ಲೋ ಹೂತಿಡುತ್ತಾರೆ. ಆದರೆ ಇಲ್ಲೊಂದು ಕಡೆ ತಾವು ಕದ್ದ ಚಿನ್ನ ಎಲ್ಲಿಟ್ಟಿದ್ದಾರೆ ಗೊತ್ತೇ..?
ಹೌದು. ಇಲ್ಲೊಂದು ಕಡೆ ಸ್ಮಶಾನದಲ್ಲಿ ಚಿನ್ನ.ಚಿನ್ನಾಭರಣ ಕಳವು ಪ್ರಕರಣಕ್ಕೆ ಹುಡುಕಾಟ ನಡೆಸಿದಾಗ ಸ್ಮಶಾನದಲ್ಲಿ ಹೂತಿಟ್ಟಿದ್ದ 16 ಕೆಜಿ ಚಿನ್ನವನ್ನು ತಮಿಳಿನಾಡಿನ ವೆಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೆಲ್ಲೂರು ನಗರದ ಜ್ಯುವೆಲ್ಲರಿ ಶೋರೂಂನಿಂದ ಕಳವಾಗಿದ್ದ 16 ಕೆಜಿ ಚಿನ್ನವನ್ನು ಸೋಮವಾರ ಸ್ಮಶಾನದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 15 ರಂದು ಮುಸುಕುಧಾರಿಯೊಬ್ಬ ಅಂಗಡಿಗೆ ನುಗ್ಗಿ 16 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣವನ್ನು ಬೇಧಿಸಲು ನಿಯೋಜನೆಗೊಂಡಿದ್ದ ವಿಶೇಷ ತಂಡ ಸಿಸಿಟಿವಿಯ ಆರೋಪಿಯನ್ನು ಅನೈಕಟ್ನಲ್ಲಿ ಬಂಧಿಸಲಾಗಿತ್ತು.ವಿಚಾರಣೆಯ ವೇಳೆ ಆತ ನಗರದಿಂದ 40 ಕಿ.ಮೀ ದೂರದಲ್ಲಿರುವ ಓದುಕತ್ತೂರಿನ ಸ್ಮಶಾನದಲ್ಲಿ ಚಿನ್ನವನ್ನು ಹೂತಿಟ್ಟಿರುವುದಾಗಿ ತಿಳಿಸಿದ್ದ. ಈ ಮಾಹಿತಿ ಆಧಾರದ ಪೊಲೀಸರು ಜಾಗಕ್ಕೆ ತೆರಳಿ ಚಿನ್ನವನ್ನು ಮೇಲಕ್ಕೆ ಎತ್ತಿದ್ದಾರೆ. ಬಂಧಿತ ವ್ಯಕ್ತಿ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.ಅಂತೂ ಆತನ ಸ್ಮಶಾನದಲ್ಲಿ ಇರಿಸಿದ ಚಿನ್ನ ರೋಚಕತೆ ಮೂಡಿಸಿದೆ.