ಬಿಳಿನೆಲೆ : ಸಿಪಿಸಿಆರ್‌ಐನ ತೋಟದ ಕೆರೆಯಲ್ಲಿದ್ದ ಮೊಸಳೆ ಸೆರೆ

Share the Article

ಕಡಬ : ತಾಲೂಕಿನ ಬಿಳಿನೆಲೆ ಕಿದು ಸಿಪಿಸಿಆರ್’ಐ ಸಂಸ್ಥೆಯ ತೋಟದ ಕೆರೆಯಲ್ಲಿ ಕಂಡುಬಂದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ವತಿಯಿಂದ ಸೆರೆ ಹಿಡಿದು ಸ್ಥಳಾಂತರಿಸಿದ್ದಾರೆ.

ಅಲ್ಲಿನ ಕೆರೆಯಲ್ಲಿ ಹಲವು ಸಮಯಗಳಿಂದ ಮೊಸಳೆ ಇರುವ ಬಗ್ಗೆ ಹಾಗೂ ಸಮಸ್ಯೆ ಉಂಟಾಗುವ ಹಿನ್ನಲೆಯಲ್ಲಿ ಸ್ಥಳಾಂತರಿಸಲು ಅರಣ್ಯ ಇಲಾಖೆಗೆ ಸಿಪಿಸಿ ಆರ್ ಐ ಸಂಸ್ಥೆ ಮಾಹಿತಿ ನೀಡಿದ್ದರು. ಅದಂತೆ ಅರಣ್ಯ ಇಲಾಖೆ ಅವರು ಕೆರೆಯ ಬಳಿ ಎರಡು ದಿನಗಳ ಹಿಂದೆ ಬೋನು ಇರಿಸಿದ್ದರು.

ಶುಕ್ರವಾರ ರಾತ್ರಿ ಮೊಸಳೆ ಬೋನಿಗೆ ಬಿದ್ದಿದ್ದು, ಶನಿವಾರ ಅಧಿಕಾರಿಗಳು ಬೋನಿನಲ್ಲಿದ್ದ ಮೊಸಳೆಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಅರಣ್ಯ ಇಲಾಖೆಯ ಎಸಿಎಫ್ ಪ್ರವಿಣ್ ಶೆಟ್ಟಿ, ಆರ್.ಎಫ್.ಒ. ರಾಘವೇಂದ್ರ ಎಚ್.ಪಿ., ಅರಣ್ಯ ಇಲಾಖೆ ಸಿಬ್ಬಂದಿಗಳು, ಸಿಪಿಸಿಆರ್’ಐ ಸಂಸ್ಥೆ ಸಿಬ್ಬಂದಿಗಳು ಕಾರ್ಯಚರಣೆ ವೇಳೆ ಹಾಜರಿದ್ದರು.

Leave A Reply