ಉಡುಪಿ : ನಾಲ್ಕು ಮಕ್ಕಳ ತಂದೆಯಾದ ಅನ್ಯಕೋಮಿನ ವ್ಯಕ್ತಿಯಿಂದ ವಿವಾಹಿತ ಮಹಿಳೆಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ !!
ನಾಲ್ಕು ಮಕ್ಕಳ ತಂದೆಯೊಬ್ಬ ವಿವಾಹಿತ ಹಿಂದೂ ಮಹಿಳೆಯ ಜೊತೆ ಎರಡನೇ ಮದುವೆಗೆ ಮುಂದಾಗಿದ್ದ ಆಘಾತಕಾರಿ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿ ಮಧ್ವನಗರದ ನಿವಾಸಿಗಳಾದ ಮಹಮದ್ ಅಶ್ಫಕ್ ಹಾಗೂ ಜಯಲಕ್ಷ್ಮೀ ಪ್ರೀತಿಸಿ ಮದುವೆಯಾಗಲು ಹೊರಟ ಜೋಡಿ. ಆದರೆ ಈತನ ಎರಡನೇ ಮದುವೆಗೆ ಆತನ ಮಕ್ಕಳಿಂದಲೇ ವಿವಾಹ ನೋಂದಣಿ ಕಚೇರಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.
2002ರಲ್ಲಿ ಮಹಮದ್ ಅಶ್ಫಕ್ ಆಸೀಫಾ ಬಾನು ಎಂಬಾಕೆ ಜೊತೆಗೆ ಮದುವೆಯಾಗಿದ್ದು 18 ವರ್ಷದ ಮಗಳು, 16 ವರ್ಷದ ಮಗ ಹಾಗೂ ಎರಡೂವರೆ ವರ್ಷದ ಇಬ್ಬರು ಅವಳಿ ಮಕ್ಕಳನ್ನು ಈತ ಹೊಂದಿದ್ದ. ಮೊದಲ ಪತ್ನಿ ಕೊರೋನಾದಿಂದಾಗಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ತನ್ನ ನಾಲ್ಕು ಮಕ್ಕಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ದೂರವಾಗಿದ್ದ.
ಅಲ್ಲದೆ ಮಕ್ಕಳಿಗೆ ತಿಳಿಯದಂತೆ ಉಡುಪಿಯ ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದು, ತಾನೊಬ್ಬ ಅವಿವಾಹಿತ ಎಂದು ಬಿಂಬಿಸಲು ನಕಲಿ ದಾಖಲೆಯನ್ನೂ ಕೊಟ್ಟಿದ್ದ. ಅಶ್ಫಕ್ ಉಡುಪಿಯ ಮಧ್ವನಗರದ ನಿವಾಸಿಯಾಗಿದ್ದರೂ, ಮಂಗಳೂರು ತಾಲೂಕಿನ ಪಡು ಪೆರಾರದ ವಿಳಾಸ ನೀಡಿದ್ದಾನೆ.
ಅಲ್ಲದೆ, ಇದೀಗ 4 ಮಕ್ಕಳನ್ನು ಬೀದಿಪಾಲು ಮಾಡಿ ಹಿಂದೂ ಧರ್ಮದ ವಿವಾಹಿತೆಯ ಜೊತೆ ಸಂಪರ್ಕ ಬೆಳೆಸಿ, ಮದುವೆಗೆ ತಯಾರಿ ನಡೆಸಿದ್ದಾನೆ. ಈ ಕುರಿತು ಮುಸ್ಲಿಂ ಸಮುದಾಯದ ಮುಖಂಡರು ಕೂಡ ಬುದ್ದಿವಾದ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ತಮಗೆ ಯಾವುದೇ ದಿಕ್ಕಿಲ್ಲದಂತೆ ಮಾಡಿ ಬೇರೆ ಮದುವೆಗೆ ಹೊರಟಿದ್ದಾರೆ. ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅಶ್ಫಕ್ ಕುಟುಂಬಸ್ಥರು, ಮಕ್ಕಳು, ಹಿಂದೂ ಮಹಾಸಭಾ ಮುಖಂಡರು ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.