ಸಚಿವರ ಪುತ್ರನ ವಿವಾಹದಲ್ಲಿ ಗಾಳಿಯಲ್ಲಿ ಗುಂಡು ಸಿಡಿಸಿ ಸಂಭ್ರಮ !! | ಬರೋಬ್ಬರಿ 40 ಜನ ಬಂದೂಕುಧಾರಿಗಳಿಂದ ಸಿಡಿದ ಗುಂಡು, ವೀಡಿಯೋ ವೈರಲ್

ಮದುವೆ ಎಂದರೆ ಸಂಭ್ರಮ. ಇತ್ತೀಚಿನ ಜನರು ಬೇರೆ ಮದುವೆಗಿಂತ ನಮ್ಮ ಮದುವೆ ಡಿಫ್ರೆಂಟ್ ಆಗಿರಬೇಕೆಂದು ಬಯಸುತ್ತಾರೆ. ಹಾಗೆಯೇ ‌ರಾಜಸ್ಥಾನದ ಸಚಿವರೊಬ್ಬರ ಪುತ್ರನ ವಿವಾಹದ ಆರತಕ್ಷತೆಯ ಕಾರ್ಯಕ್ರಮದಲ್ಲಿ ಬಂದೂಕುಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ರಾಜಸ್ಥಾನ ಸಚಿವ ಮಹೇಂದ್ರಜಿತ್ ಸಿಂಗ್ ಮಾಳವಿಯಾ ಅವರ ಪುತ್ರ ಚಂದ್ರವೀರ್ ಸಿಂಗ್ ಅವರ ಆರತಕ್ಷತೆ ಕಾರ್ಯಕ್ರಮವನ್ನು ಸೋಮವಾರ ಅದ್ಧೂರಿಯಾಗಿ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಮತ್ತು ಹಲವಾರು ಮಂತ್ರಿಗಳು ಇದ್ದರೂ ಎಲ್ಲರ ಸಮ್ಮುಖದಲ್ಲಿ ವೇದಿಕೆ ಮೇಲೆ ಗುಂಪೊಂದು ಬಂದೂಕುಗಳಿಂದ ಗುಂಡನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹೇಂದ್ರಜಿತ್ ಸಿಂಗ್ ಮಾಳವೀಯ ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 40 ಮಂದಿ ಆರತಕ್ಷತೆ ವೇಳೆ ಬಂದೂಕು ಹಿಡಿದಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

ಬಿಜೆಪಿ ಸಚಿವರಾಗಿರುವ ಧನ್ ಸಿಂಗ್ ರಾವತ್ ಅವರ ಪುತ್ರಿ ಹರ್ಷಿತಾ ಜೊತೆ ಚಂದ್ರವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಆರತಕ್ಷತೆಯ ಕಾರ್ಯಕ್ರಮವನ್ನು ಸೋಮವಾರ ಬನ್ಸ್ವಾರಾ ನಗರದ ರೆಸಾರ್ಟ್‍ವೊಂದರಲ್ಲಿ ಏರ್ಪಡಿಸಲಾಗಿತ್ತು.

Leave A Reply

Your email address will not be published.