“ಆಯುಷ್ಮಾನ್ ಭಾರತ್ ಕಾರ್ಡ್” ಯೋಜನೆಯಲ್ಲಿದೆ ಹಲವು ಸೌಲಭ್ಯಗಳು  | ಈ ಕಾರ್ಡ್ ಅನ್ನು ಡೌನ್ಲೋಡ್ ಮಾಡುವುದು ಇದೀಗ ತುಂಬಾ ಸುಲಭ !!

ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್ ಕಾರ್ಡ್’ ಯೋಜನೆ ಆರಂಭಿಸಿದೆ. ಇದರಲ್ಲಿ ಪ್ರತಿಯೊಬ್ಬ ಕಾರ್ಡುದಾರರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಬಹುದಾಗಿದೆ. ಸುಲಭವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

 

ಕರ್ನಾಟಕದಲ್ಲಿ 2018ರ ಜೂನ್‌ ತಿಂಗಳಿನಿಂದ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆ ಸಹ ಅನುಷ್ಠಾನಗೊಂಡಿದ್ದು, ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

*ಈ ಯೋಜನೆಯ ಅಡಿಯಲ್ಲಿ ಸುಮಾರು 1,650 ವಿವಿಧ ತೆರನಾದ ರೋಗಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು
*ಪ್ರತೀ ಚಿಕಿತ್ಸೆಗೆ ಪ್ರೊಸೀಜರ್‌ ನೇಮ್‌ ಮತ್ತು ಪ್ರೊಸೀಜರ್‌ ಕೋಡ್‌ ನೀಡಲಾಗಿದೆ
*ಪ್ರತೀ ಚಿಕಿತ್ಸೆಗೆ/ ಪ್ರೊಸೀಜರ್‌ಗೆ ಪ್ಯಾಕೇಜ್‌ ದರ ನಿಗದಿಪಡಿಸಲಾಗಿದೆ. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನಂತರ ಆ ಚಿಕಿತ್ಸೆಗೆ ನಿಗದಿಪಡಿಸಿದ ಪ್ಯಾಕೇಜ್‌ ಹಣವನ್ನು ಸರಕಾರ ನೇರವಾಗಿ ಚಿಕಿತ್ಸೆ ನೀಡಿದ ಆಸ್ಪತ್ರೆಗೆ ನೀಡುತ್ತದೆ
*ರೋಗಿಯು ಚಿಕಿತ್ಸೆ ಪಡೆದ ನೋಂದಾಯಿತ ಆಸ್ಪತ್ರೆಗಳಲ್ಲಿ ಹಣ ನೀಡುವ ಅಗತ್ಯ ಇರುವುದಿಲ್ಲ
*ಫ‌ಲಾನುಭವಿಗಳಿಗೆ ಚಿಕಿತ್ಸೆ ವೆಚ್ಚ, ಔಷಧ ವೆಚ್ಚ, ಪರೀಕ್ಷೆಗಳು ಮತ್ತು ಊಟ, ಪ್ರಯಾಣ ಭತ್ತೆಯನ್ನು ನೀಡಲಾಗುವುದು
*ಇದು ನಗದುರಹಿತ ಸೇವೆಯಾಗಿರುತ್ತದೆ

ಡೌನ್ಲೋಡ್ ಮಾಡುವುದು ಹೇಗೆ?

*ಆಯುಷ್ಮಾನ್ ಭಾರತ್ ಕಾರ್ಡ್ ನ್ನು ಡೌನ್‌ಲೋಡ್ ಮಾಡಲು ಬಯಸಿದರೆ https://pmjay.gov.in/ ವೆಬ್ ಸೈಟ್ ಗೆ ಹೋಗಿ
*ಈಗ ಇಲ್ಲಿ ಲಾಗಿನ್ ಆಗಲು ನಿಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ
*ಈಗ ಹೊಸ ಪುಟ ತೆರೆಯುತ್ತದೆ, ಬಳಿಕ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಮುಂದುವರಿಯಿರಿ
*ಮುಂದಿನ ಪುಟದಲ್ಲಿ ನಿಮ್ಮ ಹೆಬ್ಬೆರಳಿನ ಗುರುತನ್ನು ನೀವು ಪರಿಶೀಲಿಸಬೇಕು
*ಈಗ ‘ಅನುಮೋದಿತ ಫಲಾನುಭವಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
*ಈಗ ನೀವು ಅನುಮೋದಿತ ಗೋಲ್ಡನ್ ಕಾರ್ಡ್‌ಗಳ ಪಟ್ಟಿಯನ್ನು ನೋಡುತ್ತೀರಿ
*ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ಮತ್ತು ಕನ್ಫರ್ಮ್ ಪ್ರಿಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ
*ಈಗ ನೀವು CSC ವ್ಯಾಲೆಟ್ ಅನ್ನು ನೋಡುತ್ತೀರಿ ಅದರಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ.
*ಈಗ ಇಲ್ಲಿ ಪಿನ್ ನಮೂದಿಸಿ ಮತ್ತು ಮುಖಪುಟಕ್ಕೆ ಬನ್ನಿ
*ಡೌನ್‌ಲೋಡ್ ಕಾರ್ಡ್ ಆಯ್ಕೆಯು ಅಭ್ಯರ್ಥಿಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತದೆ.
*ಇಲ್ಲಿಂದ ನೀವು ನಿಮ್ಮ ‘ಆಯುಷ್ಮಾನ್ ಕಾರ್ಡ್’ನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು

ಈ ನಡುವೆ ಕಳೆದ ಕೆಲವು ದಿನಗಳಲ್ಲಿ ‘ಆಯುಷ್ಮಾನ್ ಕಾರ್ಡ್‌’ ಹೆಸರಿನಲ್ಲಿ ವಂಚನೆ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಈ ಯೋಜನೆಯಲ್ಲಿ ವಂಚಕರು ಇನ್ನೊಬ್ಬರ ಹೆಸರಿಗೆ ಕಾರ್ಡ್ ನೀಡಿ ಸೌಲಭ್ಯಗಳ ಲಾಭ ಪಡೆಯುತ್ತಿದ್ದಾರೆ.

ನಿಮಗೂ ಈ ರೀತಿಯ ವಂಚನೆ ನಡೆದಿದ್ದರೆ ಕೂಡಲೇ ಈ ಬಗ್ಗೆ ಪರಿಶೀಲಿಸಿ ದೂರು ನೀಡಬೇಕು. ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಹೆಸರಿನಲ್ಲಿ ಲಭ್ಯವಿರುವ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ, ತಕ್ಷಣವೇ ಆಯುಷ್ಮಾನ್ ಕಾರ್ಡ್‌ಗೆ ಸಂಬಂಧಿಸಿದ ದೂರು ನೀಡಿ.

ಈ ಸಂಖ್ಯೆಗೆ ದೂರು ನೀಡಿ

ನಿಮಗೆ ಅಥವಾ ನಿಮ್ಮಲ್ಲಿ ಯಾರಿಗಾದರೂ ಈ ರೀತಿಯ ಆಯುಷ್ಮಾನ್ ಕಾರ್ಡ್‌ ದುರ್ಬಳಕೆ ಆಗಿದ್ದರೆ ಇದರ ಬಗ್ಗೆ ನೀವು ದೂರು ನೀಡಬಹುದು. ಇಂತಹ ವಂಚನೆಗಳಿಗೆ ಸರ್ಕಾರ ಟೋಲ್ ಫ್ರೀ ಸಂಖ್ಯೆ ನೀಡಿದೆ. ನಿಮಗೂ ಈ ರೀತಿ ವಂಚನೆ ಆದಲ್ಲಿ ಕೂಡಲೇ ನೀವು ಟೋಲ್ ಫ್ರೀ ಸಂಖ್ಯೆ 180018004444ಗೆ ಕರೆ ಮಾಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು. ದೂರು ಸಲ್ಲಿಸಲು ನೀವು ಪ್ರಮಾಣೀಕೃತ ದಾಖಲೆಯನ್ನು ಹೊಂದಿರಬೇಕು.

ಇಂತಹ ಉತ್ತಮ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ಈ ಯೋಜನೆಯ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಳ್ಳಿ.

Leave A Reply

Your email address will not be published.