ನೀವು ಕೂಡ ನಿಮ್ಮ ಮೊಬೈಲ್ ಗೆ ಫೇಸ್ ಲಾಕ್ ಹಾಕಿದ್ದೀರಾ ?? | ಫೇಸ್ ಲಾಕ್ ಈ ಯುವತಿಗೆ ತಂದಿಟ್ಟ ಸಂಕಷ್ಟದ ಸ್ಟೋರಿ ಇಲ್ಲಿದೆ ನೋಡಿ
ಸಾಮಾನ್ಯವಾಗಿ ಫೋನಿನ ಸುರಕ್ಷತೆಗಾಗಿ ನಾವೆಲ್ಲರೂ ಲಾಕ್ ಇಟ್ಟುಕೊಳ್ಳುತ್ತೇವೆ. ಅದರಲ್ಲೂ ಪ್ಯಾಟರ್ನ್, ಪಿನ್ ಗಳಿಗಿಂತ ಫೇಸ್ ಲಾಕ್ ಸೂಕ್ತ ಎಂದು ಬಳಸುತ್ತೇವೆ.ಆದರೆ ಇದೀಗ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವುದಂತೂ ನಿಜ. ಹೌದು.ಮೊಬೈಲ್ಗೆ ಇಟ್ಟುಕೊಳ್ಳುವ ಲಾಕ್ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತಹ ಘಟನೆ ಚೀನಾದಲ್ಲಿ ನಡೆದಿದೆ .
ಫೇಸ್ ಲಾಕ್ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ಲಾಕ್ ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ , ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ .
ಹುವಾಂಗ್ ನಗರದ ವ್ಯಕ್ತಿಯೊಬ್ಬ ಜೂಜಾಟದಲ್ಲಿ ದೊಡ್ಡ ಪ್ರಮಾಣದ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು , ಅದನ್ನು ತೀರಿಸಲು ತನ್ನ ಗೆಳತಿಯ ಫೋನ್ನಿಂದ ಹಣ ಲಪಟಾಯಿಸಿದ್ದಾನೆ . ಗೆಳತಿಯ ಫೊನ್ನಲ್ಲಿ ಮೊದಲು ಫಿಂಗರ್ಪ್ರಿಂಟ್ ಮೂಲಕ ಓಪನ್ ಮಾಡಲು ಪ್ರಯತ್ನಿಸಿದ್ದಾನೆ . ಬಳಿಕ ಆಕೆಯ ಕಣ್ಣಿನ ರೆಪ್ಪೆಗಳನ್ನು ಬಿಡಿಸಿ ಫೇಸ್ ಲಾಕ್ ಓಪನ್ ಮಾಡಿ ಆನ್ಲೈನ್ ಹಣ ಪಾವತಿ ಆಯಪ್ ಅಲಿಪೇಗೆ ಲಾಗ್ ಇನ್ ಆಗಿದ್ದಾನೆ . ತಕ್ಷಣ ಪಾಸ್ವರ್ಡ್ ಬದಲಿಸಿ ಬರೋಬ್ಬರಿ 18 ಲಕ್ಷ ರೂಗಳನ್ನು ದೋಚಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ .
ಖಾತೆಯಲ್ಲಿ ಹಣ ಕಾಣೆಯಾಗಿರುವುದನ್ನು ಕಂಡು ಯುವತಿ ಪೊಲೀಸರಿಗೆ ದೂರು ನೀಡಿದ್ದರು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾಗಿದ್ದು , ಯುವಕನನ್ನು ತಪ್ಪಿತಸ್ತ ಎಂದು ಪರಿಗಣಿಸಿ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ .ಆನ್ಲೈನ್ನಲ್ಲಿ ವ್ಯವಹಾರ ನಡೆಸುವಾಗ ಫೋನ್ ಹಾಗೂ ಅದರ ಪಾಸ್ವರ್ಡ್ಗಳನ್ನು ಸರಿಯಾದ ಕ್ರಮಗಳಲ್ಲಿ ಜೋಡಿಸಿಕೊಂಡಿರುವುದು ಮುಖ್ಯವಾಗಿರುತ್ತದೆ.