ಹತ್ತು ರೂಪಾಯಿಯ ಚಹಾ ಕುಡಿಯಲು ತೆರಳಿ ಹತ್ತು ಲಕ್ಷ ಕಳೆದುಕೊಂಡ ಮ್ಯಾನೇಜರ್!! ರಿಲ್ಯಾಕ್ಸ್ ಗಾಗಿ ಚಹಾ ಕುಡಿದು ಬರುವಾಗ ಕಾದಿತ್ತು ಶಾಕ್!

Share the Article

ಓನರ್ ಮೊಮ್ಮಗಳ ಮದುವೆಗೆಂದು ಬ್ಯಾಂಕ್ ಗಳಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಮರಳುತ್ತಿದ್ದ ಸಂಸ್ಥೆಯ ಮ್ಯಾನೇಜರ್ ನ ಕಾರಿನಿಂದ ಸುಮಾರು ಹತ್ತು ಲಕ್ಷ ಹಣವನ್ನು ಖದೀಮರು ಎಗರಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:ಸಂಸ್ಥೆಯ ಮ್ಯಾನೇಜರ್ ಒಬ್ಬರು ತಮ್ಮ ಓನರ್ ಮೊಮ್ಮಗಳ ಮದುವೆಗೆಂದು 10 ಲಕ್ಷ ಹಣವನ್ನು ತೆಗೆದುಕೊಂಡು ಕಾರ್ ನಲ್ಲಿ ಬರುತ್ತಿರುವಾಗ ಕಾರ್ ರಸ್ತೆ ಮಧ್ಯೆ ಕಾರ್ ಕೆಟ್ಟು ನಿಂತಿತು. ಇದಾದ ಬಳಿಕ ಮೆಕ್ಯಾನಿಕ್ ಬಂದು ಕಾರ್ ರಿಪೇರಿ ಮಾಡುತ್ತಿರುವಾಗ ಮ್ಯಾನೇಜರ್ ಅಲ್ಲೇ ಪಕ್ಕದಲ್ಲಿ ಇರುವ ಚಹಾದಂಗಡಿಗೆ ಚಹಾ ಕುಡಿಯಲು ತೆರಳಿದ್ದರು.

ಇದೇ ಸರಿಯಾದ ಸಮಯವೆಂದು ಅರಿತ ಖದೀಮರು ಕಾರ್ ನ ಹಿಂಬದಿ ಗ್ಲಾಸ್ ಒಡೆದು ಕಾರ್ ಒಳಗಿದ್ದ ಹತ್ತು ಲಕ್ಷ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ ಘಟನೆಯಿಂದ ಕಂಗಾಲಾಗಿರುವ ಮ್ಯಾನೇಜರ್ ಪೊಲೀಸರ ಮೊರೆ ಹೋಗಿದ್ದು ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave A Reply