ಪಾಲ್ತಾಡು : ದ್ರಾವಿಡ ಸಂಗಮ 2021 ಆಮಂತ್ರಣ ಬಿಡುಗಡೆ

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡುಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್, ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.)
ಇದರ ವತಿಯಿಂದ ನಡೆಯುವ ಆದಿದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ ದ್ರಾವಿಡ ಸಂಗಮ – 2021 ಡಿ.25 ಹಾಗೂ ಡಿ.26ರಂದು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಪಾಲ್ತಾಡು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು.

 

ಪಾಲ್ತಾಡು ಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಅಣ್ಣು ಪಾಲ್ತಾಡು ಅವರು ಆಮಂತ್ರಣ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸತೀಶ್ ಪರ್ಲಡ್ಕ ,ರವಿ ಪರ್ಲಡ್ಕ , ಆದಿದ್ರಾವಿಡ ಸಮಾಜ ಸೇವಾ ಸಮಿತಿ ಪಾಲ್ತಾಡು ಇದರ ಸರ್ವ ಸದಸ್ಯರು ಹಾಜರಿದ್ದರು
ಲೋಕೇಶ್ ಪಾಲ್ತಾಡು ಸ್ವಾಗತಿಸಿ,ಅವಿನಾಶ್ ಪಾಲ್ತಾಡು ವಂದಿಸಿದರು

Leave A Reply

Your email address will not be published.