ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ | ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರನಿಗೆ ಹೈಕೋರ್ಟ್‌ ಛೀಮಾರಿ

ಕೊಚ್ಚಿ: ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಕೇರಳ ಹೈಕೋರ್ಟ್‌ ಛೀಮಾರಿ ಹಾಕಿದೆ.

ಆರ್‌ಟಿಐ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಲಸಿಕೆ ಪ್ರಮಾಣಪತ್ರದಲ್ಲಿ ಹಾಕಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪಿವಿ ಕುಂಞಿಕೃಷ್ಣನ್ ಅವರ ಏಕ ಪೀಠ ಪ್ರತಿಕ್ರಿಯೆ ನೀಡಿ, “ಅವರು ನಮ್ಮ ಪ್ರಧಾನಿಯೇ ಹೊರತು ಬೇರೆ ಯಾವುದೇ ದೇಶದ ಪ್ರಧಾನಿ ಅಲ್ಲ. ಅವರು ನಮ್ಮ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ ರಾಜಕೀಯ ಭಿನ್ನಾಭಿಪ್ರಾಯಗಳಿರುವುದರಿಂದ ನೀವು ಅವರ ಭಾವಚಿತ್ರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಮ್ಮ ಪ್ರಧಾನಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ? 100 ಕೋಟಿ ಜನರಿಗೆ ಇದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಹಾಗಾದರೆ ನಿಮಗೆ ಮಾತ್ರ ಯಾಕೆ ಈ ಸಮಸ್ಯೆ? ಪ್ರತಿಯೊಬ್ಬರೂ ವಿಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಹಾಗಂತ ನೀವು ಪ್ರಧಾನಿಯ ಹೆಸರು ಹಾಕಬಾರದು ಎನ್ನಲು ಆಗಲ್ಲ ಎಂದಿದೆ ಕೋರ್ಟು.

ಚೋದ್ಯದ ವಿಚಾರವೇನೆಂದರೆ, ಸದರಿ ಅರ್ಜಿದಾರರು ನವದೆಹಲಿಯ ಜವಾಹರಲಾಲ್ ನೆಹರು ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್‌ನ ರಾಜ್ಯ ಮಟ್ಟದ ಮಾಸ್ಟರ್ ಕೋಚ್ ಆಗಿದ್ದಾರೆ ಎಂದು ಹೇಳಿದೆ ನ್ಯಾಯಾಲಯ
“ನೀವು ಮಾಜೀ ಪ್ರಧಾನಿಯವರ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ, ಹಾಗಾದರೆ ಆ ಸಂಸ್ಥೆಯ ಹೆಸರನ್ನು ತೆಗೆದು ಹಾಕುವಂತೆ ನಿವ್ಯಾಕೆ ವಿಶ್ವವಿದ್ಯಾಲಯವನ್ನು  ಕೇಳಬಾರದು? ಎಂದು ಅರ್ಜಿದಾರನನ್ನು ಕುಟುಕಿದೆ ನ್ಯಾಯಾಲಯ. ನ್ಯಾಯಾಧೀಶರ ತಾರ್ಕಿಕ ಪ್ರಶ್ನೆಗೆ ಅರ್ಜಿದಾರ ತಬ್ಬಿಬ್ಬಾಗಿದ್ದಾರೆ.

“ಅವರು ನಮ್ಮ ಪ್ರಧಾನಿಯೇ ಹೊರತು ಅಮೆರಿಕದ ಪ್ರಧಾನಿಯಲ್ಲ. ಮೋದಿಯವರು ಅಧಿಕಾರಕ್ಕೆ ಬಂದದ್ದು ಜನಾದೇಶದಿಂದ ಹೊರತು ಯಾವುದೇ ಶಾರ್ಟ್‌ಕಟ್‌ಗಳ ಮೂಲಕ ಅಲ್ಲ” ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ಹೇಳಿದ್ದಾರೆ.
ಮೋದಿ ನಮ್ಮ ಪ್ರಧಾನಿ, ಸರ್ಟಿಫಿಕೇಟ್‌ನಲ್ಲಿ ಪ್ರಧಾನಿಯವರ ಫೋಟೋದಿಂದ ನಿಮೆಗ ಏನು ಸಮಸ್ಯೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಿಮ್ಮ ಅರ್ಜಿಯಿಂದ ಕೇವಲ ನ್ಯಾಯಾಲಯದ ಸಮಯ ವ್ಯರ್ಥವಾಗಿದೆ ಎಂದು ಛೀಮಾರಿಯ ಜತೆ ಪೀಟರ್ ಗೆ ಬುದ್ಧಿವಾದ ಕೂಡಾ ಹೇಳಿ ಮನೆಗೆ ಕಳಿಸಿದೆ ನ್ಯಾಯಾಲಯ.

Leave A Reply

Your email address will not be published.