ಮಂಗಳೂರು: ಜಿಲ್ಲೆಯ ಜನತೆಗೆ ಗ್ಯಾಸ್ ಸಿಲಿಂಡರ್ ವಿತರಕರು ಹೆಚ್ಚಿನ ದರಕ್ಕಾಗಿ ಪೀಡಿಸುತ್ತಿದ್ದಾರೆಯೇ!?? ಆಹಾರ ಸರಬರಾಜು ಇಲಾಖೆಯ ಜಂಟಿ ಆಯುಕ್ತರು ತಿಳಿಸಿದ ಉಪಯುಕ್ತ ಮಾಹಿತಿ ಇಲ್ಲಿದೆ

ಮಂಗಳೂರು: ಮನೆ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ವಿತರಕರು ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲ, ಒಂದು ವೇಳೆ ಹಣಕ್ಕೆ ಒತ್ತಾಯಿಸಿದರೆ ದೂರು ನೀಡುವ ಅವಕಾಶವಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಇತ್ತೀಚೆಗೆ ಬಂದ ಹೊಸ ಕಾನೂನಿನ ಪ್ರಕಾರ ನಿಗದಿಯಾದ ದರಕ್ಕಿಂತ ಹೆಚ್ಚು ಹಣ ಪಾವತಿಸುವುದಕ್ಕೆ ಕಡಿವಾಣ ಬಿದ್ದಿದೆ. ಸದ್ಯ ಜಿಲ್ಲೆಯಲ್ಲಿ ಇಂತಹ ಪ್ರಕರಣ ಕಂಡುಬಂದರೆ ಕೂಡಲೇ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ 0824-2220571 ದೂರವಾಣಿ ಸಂಖ್ಯೆಗೆ ಕರೆಮಾಡಿ ದೂರು ನೀಡಲು ತಿಳಿಸಲಾಗಿದೆ.

Leave A Reply

Your email address will not be published.