ಶಬರಿಮಲೆ : ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಅವಕಾಶ ನೀಡಿದ ಸರಕಾರ

Share the Article

ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಹೋಗಲು ಸರಕಾರ ಅವಕಾಶ ನೀಡಿದೆ.

ಕೋವಿಡ್ 19 ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ವಿಧಿಸಲಾಗಿರುವ ನಿರ್ಬಂಧಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ನವೆಂಬರ್ 16ರಿಂದ ಇಲ್ಲಿತನಕ ಶಬರಿಮಲೆಯಿಂದ ಪಂಪಾಗೆ ಬರುವ ನಿರ್ಗಮನ ಹಾದಿಯಲ್ಲಿ ಭಕ್ತರಿಗೆ ಹೋಗಲು ಅವಕಾಶ ನೀಡಲಾಗಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಂಪಾದಿಂದ ನೀಲಿಮಲೆ, ಅಪಾಚೆ ಮೇಡು ಮತ್ತು ಮರಕೂಟಂ ಮೂಲಕ ಶಬರಿಮಲೆಗೆ ಸಾಂಪ್ರದಾಯಿಕ ಮಾರ್ಗವನ್ನು ಭಕ್ತರಿಗೆ ತೆರೆಯಲು ನಿರ್ಧರಿಸಲಾಗಿದೆ.

ನೀಲಿಮಲೆ ಮತ್ತು ಅಪಾಚೆ ಮೇಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಸನ್ನಿಧಾನದಲ್ಲಿ ರಾತ್ರಿಯ ತಂಗಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ 500 ಕೊಠಡಿಗಳನ್ನು ಸ್ಥಾಪಿಸಲಾಗಿದೆ

Leave A Reply