ಇಬ್ಬರು ಹೆಂಡಿರ ಗಂಡನಿಗೆ ವಾರದಲ್ಲಿ ಒಂದೇ ರಜೆ!! ಒಂದು ರಜೆಯಲ್ಲಿ ಇಬ್ಬರನ್ನೂ ಆತ ನಿಭಾಯಿಸುವುದು ಹೇಗೆ!??

Share the Article

ಇಲ್ಲೊಬ್ಬ ಪತಿಮಹಾಷಯ ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಒಬ್ಬಾಕೆಗೆ ಮಾತ್ರ ಹೆಚ್ಚು ಪ್ರೀತಿ ತೋರಿಸಿ ಇನ್ನೊಬ್ಬಾಕೆಯನ್ನು ಕೊಂಚ ಕಡೆಗಣಿಸಿದ ಪರಿಣಾಮ ಠಾಣೆಯ ಮೆಟ್ಟಿಲೇರಿದ ಪ್ರಕರಣ ಸದ್ಯ ಒಂದು ಹಂತ ತಲುಪಿದ್ದು, ಇಬ್ಬರಿಗೂ ಸಮಪಾಲಾಗಿ, ಆತನಿಗೆ ಒಂದು ರಜೆ ನೀಡಿದ ವಿಶೇಷ ತೀರ್ಪು ಬೆಳಕಿಗೆ ಬಂದಿದೆ.

ಹೌದು, ಜಾರ್ಖಾಂಡ್ ರಾಜಧಾನಿ ರಾಂಚಿ ಯಲ್ಲಿ ಈ ಪ್ರಕರಣ ನಡೆದಿದ್ದು, ದ್ವಿ-ಪತ್ನಿಯಾರನ್ನು ಹೊಂದಿರುವ ಪತಿಯೊಬ್ಬ ತನ್ನ ಇಬ್ಬರೂ ಪತ್ನಿಯರಿಗೆ ಬೇರೆ ಬೇರೆ ಮನೆ ಮಾಡಿದ್ದ. ಆದರೆ ಒಬ್ಬರ ಬಳಿಯೇ ಹೆಚ್ಚು ಸಮಯ ಕಳೆಯುತ್ತಿದ್ದ. ಇದರಿಂದ ಬೇಸತ್ತ ಇನ್ನೊಬ್ಬ ಹೆಂಡತಿ ಪೊಲೀಸ್ ಠಾಣೆಗೆ ತೆರಳಿ ಗಂಡ ಐದು ದಿನಗಳಿಂದ ಮನೆಗೆ ಬಂದಿಲ್ಲವೆಂದು ದೂರು ನೀಡಿದ್ದಾಳೆ.

ಇದಾದ ಬಳಿಕ ಪೊಲೀಸರು ಇಬ್ಬರೂ ಪತ್ನಿಯರ ಸಹಿತ ಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಲ್ಲದೇ, ವಾರದಲ್ಲಿ ಒಬ್ಬರೊಂದಿಗೆ ಮೂರು ದಿನ ಇರುವಂತೆ ಹಾಗೂ ಒಂದು ದಿನ ಆತನಿಗೆ ರಜೆ ನೀಡಲಾಗಿದೆ. ಆ ರಜೆಯಲ್ಲಿ ಆತ ಆತನಿಗಿಷ್ಟ ಬಂದವರ ಮನೆಯಲ್ಲಿ ಇರಬಹುದೆಂದು ಹೇಳಲಾಗಿದೆ.

ಸದ್ಯ ಈ ಪ್ರಕರಣ ಹಾಗೂ ತೀರ್ಪು ಪೇಪರ್ ಗಳಲ್ಲಿ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಪೇಪರ್ ನ ಫೋಟೋ ಹೆಚ್ಚು ಸದ್ದು ಮಾಡುತ್ತಿದೆ.

Leave A Reply

Your email address will not be published.