ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ, ದುರ್ಗಾ ವಾಹಿನಿ ಬೆಳ್ತಂಗಡಿ ಪ್ರಖಂಡ ಇದರ ವತಿಯಿಂದ “ಶೌರ್ಯ ಸಂಚಲನ” ಕಾರ್ಯಕ್ರಮ

Share the Article

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ, ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ಗೀತಾ ಜಯಂತಿ ಅಂಗವಾಗಿ “ಶೌರ್ಯ ಸಂಚಲನ” ರಾಷ್ಟ್ರ ರಕ್ಷಣೆಯ ಶೌರ್ಯಪಥ ಎಂಬ ವಿನೂತನ ಕಾರ್ಯಕ್ರಮ ದಿನಾಂಕ 13/12/2021 ರಂದು ನಡೆಯಲಿದೆ.

ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಕಲಾಭವನ, ಮೇಲಂತಬೆಟ್ಟಿನಲ್ಲಿ ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜಗದ್ಗುರು ಪೀಠಾಧೀಶರು, ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ, ಕನ್ಯಾಡಿ ಇವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ರಾಗ್ನೇಶ್, ಉದ್ಯಮಿಗಳು, ಬೆಳ್ತಂಗಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕು|ಹಾರಿಕಾ ಮಂಜುನಾಥ್, ಬೆಂಗಳೂರು ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಲ್ಯಾಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಕಲಾಭವನ, ಮೇಲಂತಬೆಟ್ಟು ವರೆಗೆ ವಿಶೇಷ ಮೆರವಣಿಗೆ ನಡೆಯಲಿದೆ. ಬಿಳಿ ಅಂಗಿ ಮತ್ತು ಕೇಸರಿ ಪಂಚೆ, ಕೇಸರಿ ಶಾಲಿನೊಂದಿಗೆ ಸಂಚಲನದಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

Leave A Reply