ಕುಕ್ಕೆ ಸುಬ್ರಹ್ಮಣ್ಯ ಸಂಭ್ರಮದ ಬ್ರಹ್ಮರಥೋತ್ಸವ
ಸುಬ್ರಹ್ಮಣ್ಯ : ಡಿ.9ರ ಪ್ರಾತ:ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು.
ಬಳಿಕ ದೇವರು ರಾಜಾಂಗಣಕ್ಕೆ ಬಂದು ಶ್ರೀ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ರಥಾರೂಢರಾಗಿ, ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ರಥಾರೂಡರಾದರು. ಆ ಬಳಿಕ ಆರಂಭದಲ್ಲಿ ಪಂಚಮಿ ರಥ ರಥಬೀದಿಯಲ್ಲಿ ಸಾಗಿತು. ಬಳಿಕ ಬ್ರಹ್ಮರಥ ರಾಜ ಗಾಂಭಿರ್ಯದಿಂದ ಸಾಗಿತು.
ರಾಜಬೀದಿಯಲ್ಲಿ ರಥ ಸಾಗುವ ವೇಳೆ ನಾಗಸ್ವರ, ಪಂಚ ವಾದ್ಯ, ಜಾಗಟೆ, ಶಂಖ ವಾದ್ಯ, ಚೆಂಡೆ ವಾದನದಲ್ಲಿ ಹಿಮ್ಮೇಳದಲ್ಲಿ ಆನೆ ಬಿರುದಾವಳಿ ಮೂಲಕ ನಡೆಯಿತು. ಡಿ.8 ರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.