ವಾಯುಪಡೆಯ ಹೆಲಿಕಾಪ್ಟರ್ ಪತನಕ್ಕೂ ಮೊದಲಿನ 19ಸೆಕೆಂಡ್ ನ ವಿಡಿಯೋ | ಮೋಡದಲ್ಲಿ ಮರೆಯಾದ ಕಾಪ್ಟರ್ ಪತನ
ತಮಿಳುನಾಡಿನ ಕುನೂರ್ ಬಳಿ ಬುಧವಾರ ಪತನಗೊಂಡ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರನ್ನು ಹೊತ್ತೊಯ್ದಿದ್ದ ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ದುರಂತಕ್ಕೆ ಮೊದಲಿನ 19 ಸೆಕೆಂಡುಗಳ ವಿಡಿಯೊ ಹೊರಬಿದ್ದಿದೆ.
https://mobile.twitter.com/ANI/status/1468799533337382914?ref_src=twsrc%5Etfw%7Ctwcamp%5Etweetembed%7Ctwterm%5E1468799533337382914%7Ctwgr%5E%7Ctwcon%5Es1_&ref_url=https%3A%2F%2Fkannadadunia.com%2Flive-news%2Fvideo-captures-cds-gen-bipin-rawats-helicopter-moments-before-the-crash-watch%2F
ವೀಡಿಯೊದಲ್ಲಿ ಜನರ ಗುಂಪು ರೈಲ್ವೆ ಹಳಿಯಲ್ಲಿ ನಡೆದುಕೊಂಡು ಕೆಳಮಟ್ಟದಲ್ಲಿ ಹಾರುತ್ತಿದ್ದ ಚಾಪರ್ ನತ್ತ ನೋಡುತ್ತಿರುವುದನ್ನು ಕಾಣಬಹುದಾಗಿದೆ. ನಂತರದ ಕ್ಷಣದಲ್ಲಿ Mi-17 ಚಾಪರ್ ನೋಟದಿಂದ ದಟ್ಟವಾದ ಮೋಡದೊಳಗೆ ಕಣ್ಮರೆಯಾಗಿದೆ.
ಚಾಪರ್ ಎಂಜಿನ್ ಆಫ್ ಆಗಿದ್ದು, ಬಹುಶಃ ಬಿಪಿನ್ ರಾವತ್,ಅವರ ಪತ್ನಿ ಮತ್ತು 11 ಇತರ ಹಿರಿಯ ಅಧಿಕಾರಿಗಳು ಮತ್ತು
ಸಿಬ್ಬಂದಿಯನ್ನು ಸಾವಿಗೀಡಾದ ಅಪಘಾತವನ್ನು ಸೂಚಿಸುತ್ತದೆ. ವೀಡಿಯೊದಲ್ಲಿರುವ ಜನರು ರೋಟಾರ್ ಗಳು ಕೊನೆಗೆ ನಿಂತಿವೆ.ಸೌಂಡ್ ಕೇಳಿಲ್ಲ. ಏನಾಯಿತು, ಅದು ಕ್ರಾಶ್ ಆಯ್ತಾ ಎಂದು ಹೇಳುವುದನ್ನು ಕೇಳಬಹುದು.
ಜನರಲ್ ರಾವತ್(63) ಅವರು ಉಪನ್ಯಾಸ ನೀಡಲು ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುತ್ತಿದ್ದರು. ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಸಿಡಿಎಸ್ ಸಿಬ್ಬಂದಿ ಜತೆಗಿದ್ದರು. ಹೆಲಿಪ್ಯಾಡ್‌ನಿಂದ ಲ್ಯಾಂಡ್ ಆಗಬೇಕಿದ್ದ ಸುಮಾರು 10 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ.
ಐಎಎಫ್ ಹೆಲಿಕಾಪ್ಟರ್ ಅಪಘಾತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ ನಲ್ಲಿ ಇಂದು ಮಾಹಿತಿ ನೀಡಲಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನದಂದು ಶೌರ್ಯ ಚಕ್ರದಿಂದ ಅಲಂಕರಿಸಲ್ಪಟ್ಟ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಪ್ರಸ್ತುತ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.