ಮೈದಾಹಿಟ್ಟಿನ ರೊಟ್ಟಿಯಿಂದ ತಯಾರಿಸಿದ ಬೆಡ್ ಮಾರಾಟಕ್ಕಿದೆ!! |’ನಾನ್ ಬೆಡ್’ ಕೊಂಡರೆ 2 ‘ನಾನ್ ದಿಂಬು’ ಉಚಿತ ಎಂದು ಫೋಟೋ ವೈರಲ್ ಮಾಡಿದ ಮಾಡೆಲ್
ಖಾದ್ಯದ ಬಗ್ಗೆ ನೆನೆಸಿಕೊಂಡರೇ ಬಾಯಲ್ಲಿ ನೀರು ಬರುತ್ತೆ ಬಿಡಿ. ಭೋಜನಕ್ಕೆ ವಿವಿಧ ಬಗೆಯ ಖಾದ್ಯಗಳಿದ್ದರೆ ಅಂದು ಹಬ್ಬವೇ ಸರಿ. ಕೆಲವರಿಗೆ ಉತ್ತರ ಭಾರತೀಯ ಶೈಲಿಯ ಊಟ ಇಷ್ಟವಾದರೆ ಇನ್ನು ಕೆಲವರಿಗೆ ದಕ್ಷಿಣ ಭಾರತದ ತಿನಿಸುಗಳು ಅಚ್ಚುಮೆಚ್ಚು. ಅಂತೂ ಇಂತೂ ವಿವಿಧ ಬಗೆಯ ಖಾದ್ಯಗಳನ್ನು ಇಷ್ಟಪಡುವ ಅಭಿಮಾನಿಗಳೇ ಹೆಚ್ಚು.
ಜನಪ್ರಿಯ ಮಾಡೆಲ್ ಪದ್ಮಾ ಲಕ್ಷ್ಮಿ ಕೂಡ ಭಾರತೀಯ ಖಾದ್ಯಗಳ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರು ಬೆಡ್‍ಶೀಟ್, ತಲೆದಿಂಬನ್ನು ರೊಟ್ಟಿಯಂತೆ ಡಿಸೈನ್ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಭಾರತದ ಖ್ಯಾತ ತಿನಿಸುಗಳಲ್ಲೊಂದಾದ ನಾನ್‍ನ (ಮೈದಾಹಿಟ್ಟಿನ ರೊಟ್ಟಿ) 3ಡಿ ಪ್ರಿಂಟ್ ಇರುವ ಬೆಡ್‍ಶೀಟ್ ಹಾಗೂ ತಲೆ ದಿಂಬಿನ ಕವರ್‍ಗಳನ್ನು ಡಿಸೈನ್ ಮಾಡಿಸಿಕೊಂಡಿದ್ದಾರೆ. ಬೆಡ್‍ರೂಮ್‍ನ್ನು ವಿಭಿನ್ನವಾಗಿ ಅಲಂಕರಿಸಿದ ಫೋಟೋವನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಹಾಸಿಗೆಗೆ ಸಾಕಾಗುವಷ್ಟು ನಾನ್ ತಯಾರಿಸಿ ತಂದು ಹಾಸಿಗೆಗೆ ಹೊದಿಸಿದ್ದಾರೆ ಎನ್ನುವ ಹಾಗೆ ಬೆಡ್ ಕಾಣಿಸುತ್ತದೆ. “ನಾನ್‍ಬೆಡ್ ಮಾರಾಟಕ್ಕಿದೆ, ನಾನ್‍ನಿಂದ ತಯಾರಿಸಿದ 2 ದಿಂಬುಗಳು ಉಚಿತ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಟ್ವಿಟರ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ನೀವು ಮಲಗಿದ್ದಾಗ ಇಡೀ ಬೆಡ್ ಅನ್ನು ಸ್ವಲ್ಪ ಸ್ವಲ್ಪ ತಿನ್ನತ್ತಾ ಹೋದರೆ ಏನು ಗತಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಲಕ್ಷ್ಮೀ ಕೂಡಾ ತಮಾಷೆಯಾಗಿ ಉತ್ತರವನ್ನು ನೀಡಿದ್ದಾರೆ. ಹಾಸ್ಯಾಸ್ಪದವಾದ ಕಲವರು ಕಾಮೆಂಟ್‍ಗಳು ಈ ಪೋಸ್ಟ್ ಗೆ ಬಂದಿದೆ.