ಬ್ಯೂಟಿಪಾರ್ಲರ್ ಗೆ ಹೋದರೆ ಮಂಗವೂ ಸುಂದರವಾಗಿ ಕಾಣಿಸುತ್ತದೆ ಎಂಬ ಮಾತು ಇಲ್ಲಿ ನಿಜವಾಗಿಯೂ ನಡೆದು ಹೋಗಿದೆ | ಬ್ಯೂಟಿ ಪಾರ್ಲರ್ ಗೆ ಹೋದ ಮಂಗ ಹೇಗೆ ಕಾಣಿಸುತ್ತಿದೆ ಎಂಬ ವೀಡಿಯೋ ಇಲ್ಲಿದೆ ನೋಡಿ

ಇದೀಗ ಬ್ಯೂಟಿಫುಲ್ ಆಗಿ ಕಾಣಲು ಬ್ಯೂಟಿಪಾರ್ಲರ್ ಗೆ ಹೋಗಬೇಕು ಎಂಬಂತಾಗಿದೆ. ಹುಡುಗ -ಹುಡುಗಿ ಎನ್ನದೇ ಎಲ್ಲರೂ ಸುಂದರವಾಗಿ ಕಾಣುವ ಆಸೆಯಿಂದ ಸಲೂನ್, ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಆದ್ರೆ ಏನು ಕಾಲಾನೋ ಏನು!!ಮಂಗನೂ ಪಾರ್ಲರ್ ಹಾದಿ ಹಿಡಿದಿದೆ!!?

ಬ್ಯೂಟಿ ಪಾರ್ಲರ್‌ಗೆ ಹೋದರೆ ಮಂಗವೂ ಸುಂದರವಾಗಿ ಕಾಣಿಸುತ್ತದೆ ಎಂದು ಅಣಕಿಸುವ ಮಾತು ಚಾಲ್ತಿಯಲ್ಲಿದೆ. ಆದರೆ ಇಲ್ಲೊಂದು ಮಂಗ ನಿಜವಾಗಿಯೂ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಭಾರತೀಯ ಪೊಲೀಸ್‌ ಸೇವೆ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಮಂಗನ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ‘ಅಬ್ ಲಗ್‌ ರಹೇ ಸ್ಮಾರ್ಟ್‌’ ಅಂದರೆ ಈಗ ನೋಡು ಸುಂದರವಾಗಿ ಕಾಣಿಸುತ್ತಿ ಎಂದು ಬರೆದುಕೊಂಡಿದ್ದಾರೆ.ಇದು 45 ಸೆಕೆಂಡ್‌ಗಳ ವಿಡಿಯೋ ಆಗಿದೆ. ಇದರಲ್ಲಿ ಮಂಗ ಸಲೂನ್‌ನ ಖುರ್ಚಿಯಲ್ಲಿ ಕುಳಿತುಕೊಂಡಿದ್ದು, ಎದುರುಗಡೆ ದೊಡ್ಡ ಕನ್ನಡಿ ಇರುವುದನ್ನು ನೋಡಬಹುದು.

ಸಲೂನ್‌ನಲ್ಲಿ ಕೂದಲುಗಳನ್ನು ಟ್ರಿಮ್‌ ಮಾಡುವಾಗ ಮೈಮೇಲೆ ಬಟ್ಟೆ ಸುತ್ತುವಂತೆ ಈ ಮಂಗನಿಗೂ ಸುತ್ತಲಾಗಿದೆ. ನಂತರ ಅಲ್ಲಿರುವ ಕೆಲಸಗಾರರು ಮಂಗನ ಕೂದಲನ್ನು ಟ್ರಿಮ್‌ ಮಾಡುವ ಕೆಲಸ ಮಾಡುತ್ತಿರುವುದನ್ನು ಇದರಲ್ಲಿ ನೋಡಬಹುದು. ಇಲೆಕ್ಟ್ರಿಕ್‌ ಟ್ರಿಮರ್‌ನಲ್ಲಿ ಟ್ರಿಮ್‌ ಮಾಡುತ್ತಿದ್ದರೆ ಮಂಗ ಕೂಡ ಅಷ್ಟೇ ಸಮಾಧಾನಚಿತ್ರವಾಗಿ ಕುಳಿತುಕೊಂಡಿರುವುದು ಅಚ್ಚರಿ ತರುತ್ತದೆ. ನಂತರ ಮಂಗ ಸುಂದರವಾಗಿ ಕಾಣಿಸುತ್ತಿದೆ ಎಂದು ಕಮೆಂಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂತೂ ಪ್ರಾಣಿಗಳು ಕೂಡ ಫ್ಯಾಷನ್ ಯುಗಕ್ಕೆ ಅಂಬೆಗಾಲು ಇಟ್ಟೇ ಆಯಿತು ಅಲ್ವಾ?ಇನ್ನೇನಿದ್ರೂ ಇವುಗಳಿದ್ದೆ ಹವಾ!

https://twitter.com/rupin1992/status/1465339995070222342?s=20

Leave A Reply

Your email address will not be published.