ಎಂಎಸ್ ಧೋನಿ ಹಾಗೂ ಈ ನಟಿಯ ಬ್ರೇಕಪ್ ಆಗಿದ್ದು ಹೇಗೆ?? | ಎಂಎಸ್ ಧೋನಿ ಇಂದಿಗೂ ನನ್ನ ಜೀವನದ ಅಳಿಸಲಾಗದ ಕಲೆ ಎಂದು ನಟಿ ಹೇಳಿದ್ದಾದರೂ ಯಾಕೆ??

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ನ ಒಂದು ದಂತಕಥೆ ಎಂದೇ ಹೇಳಬಹುದು. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಇಲ್ಲದೇ ಕ್ರಿಕೆಟ್ ಗೆ ಇದ್ದ ಕಳೆಯೂ ಈಗ ಕಡಿಮೆಯಾಗಿದೆ. ಭಾರತ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡದ್ದನ್ನು ಮಹೇಂದ್ರ ಸಿಂಗ್​ ಧೋನಿ ಮಾಡಿದ್ದಾರೆ. ಅವರು ನಿವೃತ್ತಿ ಪಡೆದ ದಿನ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಬೇರೆ ದೇಶದ ಅಭಿಮಾನಿಗಳಿಗೂ ಧೋನಿ ಅಂದರೆ ಅಚ್ಚುಮೆಚ್ಚು.


Ad Widget

Ad Widget

Ad Widget

Ad Widget
Ad Widget

Ad Widget

ಆದರೆ ಈಗ ಧೋನಿಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅದು ಕಾಲಿವುಡ್, ಸ್ಯಾಂಡಲ್​ವುಡ್​ ನಟಿಯೊಬ್ಬರು ಧೋನಿ ಬಗ್ಗೆ ಹೇಳಿಕೆ ನೀಡಿದ್ದು, ಅದು ನೆಟ್ಟಿಗರ ತಲೆಕೆಡಿಸಿದೆ. ಅಷ್ಟಕ್ಕೂ ಆ ನಟಿ ಧೋನಿ ಬಗ್ಗೆ ಹೇಳಿದ್ದೇನು ಗೊತ್ತಾ? ಎಂಎಸ್​ಡಿ ಬಗ್ಗೆ ಹೇಳಿದ ಆ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ.


Ad Widget

2009 ರಲ್ಲಿ ಸ್ಯಾಂಡಲ್​​ವುಡ್, ಕಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟಿ ಲಕ್ಷ್ಮೀ ರೈ ಜೊತೆ ಧೋನಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಕುರಿತು ಸ್ವತಃ ಲಕ್ಷ್ಮೀ ರೈ ಕೂಡ ಮಾತನಾಡಿದ್ದರು. ಸದ್ಯ ಆ ವೀಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ. ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ಹೇಳಿಕೊಂಡಿರುವ ಲಕ್ಷ್ಮೀ ಬ್ರೇಕ್‌ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂಬ ಮಾತುಗಳನ್ನು ಆಡಿದ್ದಾರೆ. “ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ,” ಎಂದು ಹೇಳಿದ್ದಾರೆ.

ಹೌದು, ತಮ್ಮ ಹಾಗೂ ಧೋನಿ ನಡುವಣ ಬ್ರೇಕ್‌ ಅ‌ಪ್‌ ಬಗ್ಗೆ 2014ರಲ್ಲಿ ಲಕ್ಷ್ಮೀ ರೈ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. “ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿಯ ಕಲೆ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ,” ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್​ ಆಗುತ್ತಿದೆ. ನೆಟ್ಟಿಗರು ಈ ವೀಡಿಯೋವನ್ನು ಈಗ ಹೆಚ್ಚು ಹೆಚ್ಚು ಶೇರ್​ ಮಾಡುತ್ತಿದ್ದಾರೆ.

ಅದಲ್ಲದೆ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದಲೇ ಬೇರೆಯಾದೆವು. ನನಗೆ ಧೋನಿ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆದರೆ, ಅದನ್ನೇ ಸಂಬಂಧ ಎಂದು ಹೇಳುವಷ್ಟು ನನಗೆ ಖಚಿತತೆ ಇರಲಿಲ್ಲ. ಏಕೆಂದರೆ ಅದು ನಮ್ಮಿಬ್ಬರ ನಡುವೆ ವರ್ಕೌಟ್ ಆಗಲಿಲ್ಲ. ಈಗಲೂ ಸಹ ನಾವಿಬ್ಬರು ಪರಸ್ಪರ ಗೌರವವನ್ನು ಹೊಂದಿದ್ದೇವೆ. ಅವರ ತುಂಬಾ ಬೆಳವಣಿಗೆ ಹೊಂದಿದ್ದು, ಮದುವೆ ಆಗಿ ಸಂತೋಷವಾಗಿದ್ದಾರೆಂದು ಲಕ್ಷ್ಮೀ ರೈ ಹೇಳಿದ್ದಾರೆ.

ಲಕ್ಷ್ಮೀ ರೈ ಬೆಂಗಳೂರಿನವರು. ಆದರೆ ಮಿಂಚಿದ್ದು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ. ಈಕೆ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ವಾಲ್ಮೀಕಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟಿದ್ದರು. ಕಲ್ಪನ, ಝಾನ್ಸಿ, ಸ್ನೇಹನಾ ಪ್ರೀತಿನಾ, ಅಟ್ಟಹಾಸ ಸಿನಿಮಾಗಳಲ್ಲಿ ಲಕ್ಷ್ಮೀ ರೈ ನಟಿಸಿದ್ದಾರೆ. ಇನ್ನು ಇವರ ಜೂಲಿ ಸಿನಿಮಾದಲ್ಲಿ ಸಖತ್​ ಬೋಲ್ಡ್​ ಹಾಗೂ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಖತ್​ ಸುದ್ಧಿಯಾಗಿತ್ತು.

error: Content is protected !!
Scroll to Top
%d bloggers like this: