ಎಲ್ಲೆಂದರಲ್ಲಿ ಕಸ ಎಸೆಯುವವರ ಫೋಟೋ ಕ್ಲಿಕ್ಕಿಸಿ 500 ರೂ. ಗೆಲ್ಲಿ !!! | ಇದೇ ಈ ಗ್ರಾಮಪಂಚಾಯತ್ ನ ವಿಶಿಷ್ಟ ಉಪಾಯ
ಸ್ವಚ್ಛ ಭಾರತ್ ಎಂಬ ಪರಿಕಲ್ಪನೆ ದೇಶದಲ್ಲಿ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದರೂ ಜನತೆ ಮಾತ್ರ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕಸದ ತೊಟ್ಟಿ ಇದ್ದರೂ ಅಲ್ಲಿ ಕಸ ಹಾಕದೆ ಎಲ್ಲೆಂದರಲ್ಲಿ ಕಸ ಬಿಸಾಕಿ ಊರಿಡೀ ಗಬ್ಬುನಾಥ ಬೀರುವ ಪರಿಸ್ಥಿತಿ ತುಂಬಾ ಕಡೆ ಮಾಮೂಲಾಗಿದೆ. ಈ ಪರಿಸ್ಥಿತಿಯನ್ನು ತಡೆಗಟ್ಟಲು ಈ ಗ್ರಾಮ ಪಂಚಾಯತ್ ಮಾಡಿದ ಉಪಾಯ ತುಂಬಾ ಪ್ರಶಂಸನೀಯವಾದುದು.
ರಸ್ತೆ ಬದಿ ಮತ್ತು ಉದ್ಯಾನವನಗಳ ಒಳಗೆ ಕಸ ಎಸೆಯುವ ಕಿಡಿಗೇಡಿಗಳ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ (ಜಿಪಿ) ಅಧಿಕಾರಿಗಳಿಗೆ ಕಳುಹಿಸುವ ಮೂಲಕ ನಾಗರಿಕರು ಈಗ 500 ರೂ ಗೆಲ್ಲಬಹುದಾಗಿದೆ.
ಎಲ್ಲಿ ಬೇಕಾದರೂ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕುಪ್ಪೆಪದವು ವಿಶಿಷ್ಟ ಉಪಾಯ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಫೋಟೋ, ವೀಡಿಯೋ ಕಳುಹಿಸಿ ಮಾಹಿತಿ ನೀಡಿದವರಿಗೆ 500 ರೂಪಾಯಿ ನಗದು ಬಹುಮಾನ ನೀಡಲು ಗ್ರಾಮ ಪಂಚಾಯಿತಿ ಮುಂದಾಗಿದೆ.
ಈ ಕಲ್ಪನೆಯು ಎಷ್ಟು ಜನಪ್ರಿಯವಾಗಿದೆ ಎಂದರೆ ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯ. ಮಾಹಿತಿ ನೀಡುವ ವ್ಯಕ್ತಿ 500 ರೂ. ಗೆದ್ದರೆ, ಅಪರಾಧಿಗೆ 1,000 ರೂ. ದಂಡ ವಿಧಿಸಲಾಗುತ್ತದೆ.
ಇಂತಹ ಉಪಾಯ ಕಂಡುಕೊಂಡ ಗ್ರಾಮಪಂಚಾಯತಿಗೆ ತುಂಬಾ ಪ್ರಶಂಸೆಗಳ ಸುರಿಮಳೆ ಸುರಿದಿದೆ. ಇಂತಹ ನಿರ್ಧಾರ ಉಳಿದ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಬೇಕಿದೆ.