ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ
ಶಬರಿಮಲೆ :ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಈತನ್ಮದ್ಯೆ ಸೋಮವಾರ ಸಂಜೆ ಶಬರಿಮಲೆ ಹಾಗೂ ಪರಿಸರದ ನೀಲಕಲ್ ಮೊದಲಾದೆಡೆ ಮಳೆಯಾಗುತ್ತಿದೆ.
ಇದರಿಂದಾಗಿ ಭಕ್ತರಿಗೆ ಕಿರಿ ಕಿರಿಯಾಗಿದೆ.ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.ಅಲ್ಲದೆ ಶಬರಿಮಲೆ ಸನ್ನಿಧಾನ,ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ ಭಕ್ತರಿಗೆ ತಂಗಲು ಅವಕಾಶ ನೀಡಲಾಗಿಲ್ಲ.ಸಂಜೆ 7 ರಿಂದ ರಾತ್ರಿ 1 ರ ತನಕ ನೀಲಕ್ಕಲ್ನಿಂದ ಪಂಪಾ ಕಡೆಗೆ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಭಕ್ತಾದಿಗಳು ಆನ್ಲೈನ್ ಟಿಕೇಟ್, ಕೋವಿಡ್ 2 ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ RTPCR Negative ರಿಪೋರ್ಟ್ ಕಡ್ಡಾಯವಾಗಿದೆ.ನೀಲಕಲ್ ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭಕ್ತಾಧಿಗಳಿಗೆ ಶಬರಿಮಲೆಗೆ ಹೋಗಲು ಅನುಮತಿ ನೀಡಲಾಗುತ್ತದೆ.ನೀಲಕಲ್ ಮಹಾದೇವ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12.30ಯಿಂದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್ ವತಿಯಿಂದ ಮಾಡಲಾಗಿದೆ.