ರಾಜ್ಯದ ಕೃಷಿಕರಿಗೆ ಸಿಹಿಸುದ್ದಿ!!ಇಲ್ಲಿದೆ ಅಡಕೆ ಕೃಷಿಕರ ಕಣ್ಣೊರೆಸುವ ಹೊಸ ಯೋಜನೆ!! ಕೂಲಿ ಆಳುಗಳ ಸಮಸ್ಯೆಗೆ ಸಿಲುಕಿದ್ದ ರೈತನ ಮೊಗದಲ್ಲಿ ಮೂಡಿದೆ ಮಂದಹಾಸ!
ಆಧುನಿಕವಾಗಿ ತಂತ್ರಜ್ಞಾನದ ಆವಿಷ್ಕಾರ ಹೆಚ್ಚಾಗಿದ್ದು, ಈ ನಡುವೆ ಕೃಷಿ ಚಟುವಟಿಕೆಗಳಿಗೂ ತಂತ್ರಜ್ಞಾನದ ಬಳಕೆಯಿಂದಾಗಿ ಕೃಷಿ ಕ್ಷೇತ್ರವೂ ನಿರೀಕ್ಷೆಗೂ ಮೀರಿ ಸುಧಾರಣೆ ಕಂಡಿದೆ.
ಸದ್ಯ ಕೂಲಿ ಆಳುಗಳು ಸಿಗದೇ ತೊಂದರೆ ಅನುಭವಿಸುತ್ತಿರುವ ಕೃಷಿಕರಿಗೆ ಇನ್ನೊಂದು ಸಿಹಿ ವಿಚಾರ ಇಲ್ಲಿದೆ. ಅದೇನೆಂದರೆ ಇಲ್ಲಿತನಕ ಕೇವಲ ಒಣ ಅಡಕೆ ಸುಳಿಯುವ ಯಂತ್ರ ಪರಿಚಯವಿದ್ದು, ಸದ್ಯ ಹಣ್ಣಡಕೆ ಸುಳಿಯುವ ಯಂತ್ರವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯುವ ಸಂಶೋಧಕ ಕುಂಟುವಳ್ಳಿ ವಿಶ್ವನಾಥ್ ಕೈಚಳಕದಿಂದ ವಿ-ಟೆಕ್ ಎಂಜಿನೀರ್ಸ್ ಸಂಸ್ಥೆಯ ಮೂಲಕ ರೈತರಿಗಾಗಿ ಮಾರುಕಟ್ಟೆಗೆ ತರಲಾಗಿದೆ.
ಕಳೆದ ಮೂರು ದಶಕಗಳಿಂದ ಅಡಕೆ ಧಾರಣೆಯಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ಬದಲಾಗಿದ್ದು, ಕೂಲಿ ಆಳುಗಳ ಸಮಸ್ಯೆಯಿಂದಾಗಿ ಕೃಷಿಕರು ಹದಗೆಟ್ಟಿದ್ದರು. ಸದ್ಯ ಈ ಹೊಸ ಆವಿಷ್ಕಾರ ಕೃಷಿಕರ ಕೈಹಿಡಿಯಲಿದ್ದು, ಕೃಷಿಕರ ಸಂತೋಷ ಮುಗಿಲುಮುಟ್ಟಿದೆ.